ಕಿಚ್ಚ ಸುದೀಪ್, ದುನಿಯಾ ವಿಜಯ್‌ಗೆ ಬೆಂಬಲ ನೀಡೋದು ನಮ್ಮ ಧರ್ಮ (ನಾಗಶೇಖರ್, ನಿರ್ದೇಶಕ)

  • 3 years ago
"ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಿವೆ. ಆದರೆ ಸಿನಿಮಾ ರಿಲೀಸ್ ಮಾಡಲು ಮುಂದೆ ಬರದಿದ್ದರೆ ಯಾವಾಗ ಸಿನಿಮಾ ನೋಡೋದು? ಆ ನೋಡುವ ಕೆಲಸವನ್ನು ದುನಿಯಾ ವಿಜಯ್, ಕಿಚ್ಚ ಸುದೀಪ್ ಮಾಡ್ತಿದ್ದಾರೆ. ಸಿನಿಮಾ ರಿಲೀಸ್ ಆಗ್ತಿರೋದು ಖುಷಿಯಾಗುತ್ತಿದೆ, ನಾವು ಪ್ರೊಫೆಶನಲ್ ಆಗಿರೋದರಿಂದ ಯಾವುದೇ ಚಾಲೆಂಜ್, ಟೆನ್ಶನ್ ಏನಿಲ್ಲ. ವಿಚ್ಛೇದನ ಯಾಕೆ ಜಾಸ್ತಿ ಆಗ್ತಿದೆ? ಮತ್ತೆ ಬದುಕಬೇಕು, ಸಾಯಬೇಕು ಎಂದು ಯಾಕೆ ಅನಿಸತ್ತೆ ಎಂಬುದರ ಕುರಿತಂತೆ ಸಿನಿಮಾ ಇರಲಿದೆ. ಈ ಸಿನಿಮಾ ನೋಡಿದಾಗ ನಾಗಶೇಖರ್ ಅವರು ಯಾರೂ ಮುಟ್ಟಿರದ ವಿಷಯದ ಬಗ್ಗೆ ಸಿನಿಮಾ ಮಾಡಿದ್ದಾರೆ ಅಂತ ಸಿನಿಮಾ ನೋಡಿದವರು ಹೇಳುತ್ತಾರೆ. shreekrishna@gmail.com ಇಮೇಲ್ ಐಡಿಯಿಂದ ಆಗುವ ಘಟನೆಗಳ ಕುರಿತಂತೆ ಸಿನಿಮಾ ಇರಲಿದೆ. ಡಾರ್ಲಿಂಗ್ ಕೃಷ್ಣ ಜೊತೆ ನಾನು ಈ ಹಿಂದೆ ಕೆಲಸ ಮಾಡಿದ್ದೇನೆ, ಲವ್ ಮಾಕ್ಟೇಲ್ ಸಿನಿಮಾದ ತೆಲುಗು ಹಕ್ಕನ್ನು ನಾನು ಪಡೆದಿದ್ದೆ. ಡಾರ್ಲಿಂಗ್ ಕೃಷ್ಣ ಸಿನಿಮಾ ಹಿಟ್ ಕೂಡ ಆಗಿರೋದರಿಂದ ಅವರ ಜೊತೆ ಸಿನಿಮಾ ಮಾಡಲು ಮುಂದಾದೆ. ನಾನು ತಮಿಳು ಸಿನಿಮಾವೊಂದರಲ್ಲಿ ನಾಯಕ ಆಗಿ ನಟಿಸುತ್ತಿದ್ದೇನೆ" ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ. (ಚಿಟ್‌ಚಾಟ್)

Recommended