ಡಾರ್ಲಿಂಗ್ ಕೃಷ್ಣ 'shreekrishna@gmail.com' ಕಥೆಯೇನು? ನಾಗಶೇಖರ್ ಮಾತು

  • 3 years ago
ಡಾರ್ಲಿಂಗ್ ಕೃಷ್ಣ, ಭಾವನಾ ಮೆನನ್ ಅಭಿನಯದ 'shreekrishna@gmail.com' ಸಿನಿಮಾ ಅಕ್ಟೋಬರ್ 15ಕ್ಕೆ ರಿಲೀಸ್ ಆಗುತ್ತಿದೆ. ಈ ಕುರಿತಂತೆ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿ, "ಚಿತ್ರೋದ್ಯಮ ಕಷ್ಟದಲ್ಲಿದೆ, ಕೆಲಸಗಾರರಿಗೆ ಸಹಾಯ ಆಗಬೇಕು, ಸಿನಿಮಾ ಮಾಡೋಣ ಎಂದು ಸಂದೇಶ್ ನಾಗರಾಜ್ ಅವರು ಹೇಳಿದ್ದರು. ನನಗೆ ಅವರ ಉದ್ದೇಶ ಇಷ್ಟ ಆಯ್ತು. ನಿರ್ಮಾಪಕರು ಇದುವರೆಗೂ ಸಿನಿಮಾ ಕಥೆ ಕೇಳಿಲ್ಲ. ಡಾರ್ಲಿಂಗ್ ಕೃಷ್ಣ, ಭಾವನಾ ಮೆನನ್ ಅವರನ್ನು ಲೀಡ್ ಪಾತ್ರಕ್ಕೆ ಹಾಕಿಕೊಂಡೆವು. ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ಆಗೋದು ತಡವಾಯ್ತು. ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರು ಈ ಚಿತ್ರಕ್ಕೆ ಒಳ್ಳೆಯ ಪ್ರಯತ್ನ ಹಾಕಿರೋದು ನನಗೆ ಇಷ್ಟ ಆಗಿದೆ. ನನ್ನ ಸಿನಿಮಾ ಅಂತ ಅಂದಾಗ ಸಂಗೀತಕ್ಕೆ ಮಹತ್ವ ಇರುತ್ತದೆ, ಅಂತೆಯೇ ಅರ್ಜುನ್ ಜನ್ಯಾ ಒಳ್ಳೆಯ ಹಾಡು ನೀಡಿದ್ದಾರೆ, ಅವು ಹಿಟ್ ಆಗಿವೆ. ವಿಚ್ಛೇದನ, ಸಿಂಗಲ್ ಪೇರೆಂಟ್ ಕುರಿತಾಗಿ ಸಿನಿಮಾ ಇದೆ. 150 ಸಿನಿಮಾ ಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ" ಎಂದು ನಿರ್ದೇಶಕ ನಾಗಶೇಖರ್ ಮಾಹಿತಿ ಹಂಚಿಕೊಂಡಿದ್ದಾರೆ.

Recommended