ಪ್ಯಾಸೆಂಜರ್ ವೆಹಿಕಲ್ ವ್ಯವಹಾರಕ್ಕಾಗಿ ಹೊಸ ಪಾಲುದಾರರನ್ನು ಹುಡುಕುತ್ತಿರುವ ಟಾಟಾ ಮೋಟಾರ್ಸ್

  • 4 years ago
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ಯಾಸೆಂಜರ್ ವೆಹಿಕಲ್ ವ್ಯವಹಾರಕ್ಕಾಗಿ ಹೊಸ ಪಾಲುದಾರರನ್ನು ಹುಡುಕುತ್ತಿದೆ ಎಂದು ಹೇಳಲಾಗಿದೆ. ಮುಂದಿನ ದಶಕದಲ್ಲಿ ತನ್ನ ಬೆಳವಣಿಗೆಯ ಯೋಜನೆಗಳನ್ನು ವೇಗಗೊಳಿಸುವ ಉದ್ದೇಶದಿಂದ ಕಂಪನಿಯು ಮತ್ತೊಂದು ವಾಹನ ತಯಾರಕ ಕಂಪನಿಯೊಂದಿಗೆ ಸಹಭಾಗಿತ್ವವನ್ನು ಹೊಂದಲು ಮುಂದಾಗಿದೆ.

ಇದರಿಂದಾಗಿ ಟಾಟಾ ಮೋಟಾರ್ಸ್ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ನಿಯಮಗಳನ್ನು ಅಳವಡಿಸಿಕೊಳ್ಳಲು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಾಧ್ಯವಾಗಲಿದೆ.

ಟಾಟಾ ಮೋಟಾರ್ಸ್ ಕಂಪನಿಯ ಆಡಳಿತ ಮಂಡಳಿ ಸದಸ್ಯರು ಈ ವರ್ಷದ ಆರಂಭದಲ್ಲಿ ಪ್ಯಾಸೆಂಜರ್ ವೆಹಿಕಲ್ ವ್ಯವಹಾರಕ್ಕಾಗಿ ಪ್ರತ್ಯೇಕ ಘಟಕವನ್ನು ರಚಿಸುವ ಪ್ರಸ್ತಾಪಕ್ಕೆ ಅಂಗೀಕಾರ ನೀಡಿದ್ದರು.

Recommended