Skip to playerSkip to main contentSkip to footer
  • 4/21/2020
ಭಾರತದಲ್ಲಿ ಆಯುರ್ವೇದಕ್ಕೆ ತುಂಬಾ ಪ್ರಾಶಸ್ತ್ಯ ಇದೆ. ಅಲೋಪತಿಯಲ್ಲಿ ಗುಣವಾಗದ ಎಷ್ಟೋ ಕಾಯಿಲೆಗಳನ್ನು ಆಯುರ್ವೇದ ಔಷಧ ಪದ್ಧತಿ ಮೂಲಕ ಗುಣಪಡಿಸಿರುವ ಎಷ್ಟೋ ಉದಾಹರಣೆಗಳಿವೆ. ನಮ್ಮ ಪರಿಸರದಲ್ಲಿ ಅನೇಕ ರೋಗ ನಿರೋಧಕ ಸಸ್ಯಗಳು, ಬೇರುಗಳಿವೆ, ಅವುಗಳನ್ನು ಬಳಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈಗ ಬಂದಿರುವ ಕೊರೊನಾವೈರಸ್‌ ವಿರುದ್ಧ ಹೋರಾಡಬೇಕೆಂದರೆ ಮೊದಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಅದಕ್ಕಾಗಿ ಯೋಗ, ಹೋಮಿಯೋಪತಿ, ಆಯುರ್ವೇದದ ಸೂತ್ರಗಳನ್ನು ಅನುಸರಿಸುವಂತೆ ಪ್ರಧಾನಿಯೇ ಏಪ್ರಿಲ್ 14ರಂದು ಸಲಹೆ ನೀಡಿದ್ದಾರೆ. ಕೊರೊನಾವೈರಸ್‌ ವಿರುದ್ಧ ಹೋರಾಡಲು ಮನೆಯಲ್ಲಿಯೇ ಇರುವುದರ ಜೊತೆಗೆ ಜನರು ಪಾಲಿಸಬೇಕಾದ ಸಪ್ತ ಸೂತ್ರಗಳ ಬಗ್ಗೆ ಆಯುಷ್‌ ಇಲಾಖೆಯಲ್ಲಿ ಸಲಹೆಗಳಿವೆ. ಅವುಗಳನ್ನು ಪಾಲಿಸುವಂತೆ ಹೇಳಿದ್ದರು. ಆಯುಷ್‌ ಇದರ ವಿಸ್ತೃತ ರೂಪ ಆಯುರ್ವೇದ, ಯೋಗ, ನ್ಯಾಚುರಾಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ. ಇವೆಲ್ಲಾ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಚಿಕಿತ್ಸೆ ನೀಡುವ ಭಾರತೀಯ ಸನಾತನ ಮೂಲದ ಚಿಕಿತ್ಸಾ ವಿಧಾನಗಳಾಗಿವೆ. ಹಾಗಾದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆ ನೀಡಿರುವ ಸಲಹೆಗಳೇನು ಎಂದು ನೋಡೋಣ:

Recommended