ರಿವೋಲ್ಟ್ ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕ್‌‌ಗಳು ಬಿಡುಗಡೆ

  • 5 years ago
ರಿವೋಲ್ಟ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಆರ್‌ವಿ300 ಮತ್ತು ಆರ್‌ವಿ400 ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಹೊಸ ಬೈಕ್‌ಗಳನ್ನು ಆಯ್ಕೆ ಮಾಡಬಹುದು. ಆಕರ್ಷಕ ಬೆಲೆಗಳಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಇಎಂಐ ಆಧಾರದ ಮೇಲೆ ಖರೀದಿಸಬಹುದಾಗಿದ್ದು, ಪ್ರತಿ ತಿಂಗಳಿಗೆ ರೂ.2,999(ಆರ್‌ವಿ300), ರೂ.3,499(ಆರ್‌ವಿ400 ಬೆಸ್) ಮತ್ತು ರೂ.3,999(ಆರ್‌ವಿ400 ಪ್ರೀಮಿಯಂ) ದರ ನಿಗದಿ ಮಾಡಲಾಗಿದೆ.

ಒಟ್ಟು 37 ತಿಂಗಳ ಅವಧಿಗೆ ಇಎಂಐ ದರಗಳನ್ನು ನಿಗದಿ ಮಾಡಲಾಗಿದ್ದು, 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿರುವ ಆರ್‌ವಿ300 ಮತ್ತು 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿರುವ ಆರ್‌ವಿ400 ಬೈಕ್‌ಗಳು ಪ್ರತಿ ಚಾರ್ಜ್‌ಗೆ 156 ಕಿ.ಮಿ ನಿಂದ 180 ಕಿ.ಮಿ ಮೈಲೇಜ್ ನೀಡುವುದಲ್ಲದೇ ಪ್ರತಿ ಗಂಟೆಗೆ 65 ಕಿ.ಮೀ ನಿಂದ 85 ಕಿ.ಮೀ ಟಾಪ್ ಸ್ಪಿಡ್ ಹೊಂದಿವೆ.

Recommended