31-10-2018: ಬುಧವಾರದ ರಾಶಿ ಭವಿಷ್ಯ | Boldsky

  • 6 years ago
ಪ್ರತಿಯೊಬ್ಬರು ಜೀವನದಲ್ಲಿ ಖುಷಿಯಿಂದ ಇರಬೇಕು ಎಂದು ಬಯಸುವುದು ಸಹಜ. ಆದರೆ ಸುಖ ದುಃಖಗಳು ಮನುಷ್ಯನ ಜೀವನದಲ್ಲಿ ಸಮ ಪ್ರಮಾಣದಲ್ಲಿ ಅನುಭವಿಸಬೇಕು ಎನ್ನುವುದು ವಿಧಿ ನಿಯಮ. ಹಾಗಾಗಿ ಸುಖ ಬಂದಾಗ ಅಹಂಕಾರ ಪಡದೆ, ದುಃಖ ಬಂದಾಗ ಜೀವನದ ಭರವಸೆಯನ್ನೇ ಕಳೆದುಕೊಳ್ಳದೆ ಬದುಕನ್ನು ನಡೆಸಬೇಕು. ಆಗ ಜೀವನದ ನಿಜವಾದ ಅರ್ಥ ಹಾಗೂ ಸೊಬಗು ಅರಿವಾಗುವುದು. ಸುಖ ಬಂದಾಗ ದೈವ ಶಕ್ತಿಯನ್ನು ಮರೆಯುವುದು ಹಾಗೂ ದುಃಖ ಬಂದಾಗ ದೇವರಲ್ಲಿ ಪರಪರಿಯಾಗಿ ಮೊರೆಯಿಡಬಾರದು. ಪ್ರತಿಕ್ಷಣವೂ ದೇವರ ಬಗ್ಗೆ ನಂಬಿಕೆ ಹಾಗೂ ಭರವಸೆಯಿಟ್ಟು, ಭಕ್ತಿ ಭಾವದಿಂದ ಆರಾಧಿಸಬೇಕು. ಆಗ ನೋವಿನ ಪ್ರಮಾಣ ಕಡಿಮೆಯಾಗಿ ಖುಷಿಯ ಪ್ರಮಾಣ ಹೆಚ್ಚಾಗುವುದು. ನಾವು ಹುಟ್ಟಿದಗಳಿಗೆ ಹಾಗೂ ಕುಂಡಲಿಯಲ್ಲಿ ಉಂಟಾಗುವ ಗ್ರಹಗತಿಗಳ ಬದಲಾವಣೆಯಿಂದ ನಮ್ಮ ಅದೃಷ್ಟ ಹಾಗೂ ನತದೃಷ್ಟಗಳು ನಿರ್ಧರಿತವಾಗುತ್ತದೆ. ಇನ್ನು ಬುಧವಾರದ ದಿನ ಸೃಷ್ಟಿ ರಕ್ಷಕ ವಿಷ್ಣುವಿನ ದಿನ. ಮಹಾವಿಷ್ಣು ಯಾವಾಗ ಧರ್ಮ ನಾಶವಾಗುತ್ತದೆಯೋ, ಅಧರ್ಮ ಮಿತಿವೀರುತ್ತದೆಯೋ ಆಗ ವಿಷ್ಣು ನಾನಾ ಅವತಾರ ಎತ್ತುತ್ತಾನೆ.ಶಿಷ್ಟ ರಕ್ಷಣೆಗಾಗಿ ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮ ಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತಾನೆ.ಇದು ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀ ಕೃಷ್ಣನೇ ಹೇಳಿರುವ ಮಾತು. ಈ ಮಾತಿನಂತೆ ಶ್ರೀ ಮಹಾವಿಷ್ಣು ದುಷ್ಟ ಶಕ್ತಿಯ ನಾಶಕ್ಕಾಗಿ ಧರ್ಮರಕ್ಷಣೆಗಾಗಿ ಕಾಲಕಾಲಕ್ಕೆ ಭೂಮಿಯ ಮೇಲೆ ಹತ್ತು ಅವತಾರಗಳನ್ನು ತಳೆದಿದ್ದಾನೆ.ಇದೇ ವಿಷ್ಣುವಿನ ದಶಾವತಾರ.ವಿಷ್ಣುವಿನ ದಶವತಾರಗಳು, ಮತ್ಸ್ಯಾವತಾರ,ಕೂರ್ಮಾವತಾರ,ವರಹಾವತಾರ, ನರಸಿಂಹವತಾರ, ಪರಶುರಾಮನವತಾರ, ರಾಮಾವತಾರ ,ಕೃಷ್ಣಾವತಾರ, ಬುದ್ದಾವತಾರ ಮತ್ತು ಕಲ್ಕಿವತಾರ. ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು,ಸಕಲ ಲೋಕಗಳ ಪಾಲಕ ಎಂದು ಭಗವದ್ಗೀತೆಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ'.ನಾರಾಯಣ ಎಂದೂ ಕರೆಯುತ್ತಾರೆ. ವಿಷ್ಣುವಿನ ಕೀರ್ತಿನಾರಾಯಣನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ನೋಡಿ

Recommended