No, it isn’t UIDAI toll-free number! - KANNADA

  • 6 years ago
ಕಳೆದ ಒಂದು ದಿನದಲ್ಲಿ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ UIDAI ಎನ್ನುವ ಕಾಂಟೆಕ್ಟ್ ಒಂದು ಸೇವ್ ಆಗಿದೆ. ಇದರಲ್ಲಿ 1800-300-1947 ಎನ್ನುವ ಸಂಖ್ಯೆಯೊಂದು ಕಾಣಿಸಿಕೊಂಡಿದ್ದು, ಇದು ಆಧಾರ್ ಹೆಲ್ಪ್ ಲೈನ್ ಸಂಖ್ಯೆ ಎನ್ನುವ ಹೆಸರಿನಲ್ಲಿ ಸೇವ್ ಆಗಿದೆ. ಈ ಕುರಿತು ಫೋನ್‌ ಬಳಕೆದಾರರಿಗೆ ಯಾವುದೇ ಮಾಹಿತಿ ಇಲ್ಲ. ಹೇಗೆ ಇದು ಫೋನಿನಲ್ಲಿ ಸೇವ್ ಆಯ್ತು, ಯಾಕೆ ಸೇವ್ ಆಯ್ತು ಎನ್ನುವುದು ತಿಳಿದಿಲ್ಲ. ಈ ಹಿನ್ನಲೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ.ಆಧಾರ್ ಕಾರ್ಡ್‌ ಹೊಂದಿರುವ ಎಲ್ಲಾ ಭಾರತೀಯರ ಮೊಬೈಲ್‌ಗಳು ಹ್ಯಾಕ್ ಆಗಿದೆಯೇ ಎಂಬ ಪ್ರಶ್ನೇ ಇದರಿಂದ ಉದ್ಬವವಾಗಿದೆ. ಇದನ್ನು ತಾನು ಮಾಡಿಸಿಲ್ಲ ಎಂದು ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ ತಿಳಿಸಿದೆ. ಅಲ್ಲದೇ ಅದು ವ್ಯಾಲಿಡ್ ನಂಬರ್ ಸಹ ಅಲ್ಲ ಎಂದಿದೆ. ನಿಮ್ಮ ಫೋನ್ ಹ್ಯಾಕ್ ಆಗಿದೆ ಬೇಕಿದ್ದರೇ ನೀವು ಟ್ರೈ ಮಾಡಿ. ನಿಮ್ಮ ಫೋನಿನಲ್ಲಿ ಕಾಂಟೆಕ್ಟ್‌ ಒಪನ್ ಮಾಡಿ ಅದರಲ್ಲಿ 'UIDIA' ಎಂದು ಟೈಪ್ ಮಾಡಿ ನಿಮ್ಮ ಫೋನ್ ಹ್ಯಾಕ್ ಆಗಿರುವುದು ತಿಳಿಯಲಿದೆ. ಈ ಹೆಸರಿನಲ್ಲಿ ನಂಬರ್ ಒಂದು ಸೇವ್ ಆಗಿರಲಿದೆ.
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Gizbot Youtube Channel: https://www.youtube.com/user/GizbotTME
► Follow us on Dailymotion: http://www.dailymotion.com/gizbot

Recommended