ಮುಖದಲ್ಲಿ ಮೂಡುವ ಕಲೆಗಳ ನಿವಾರಣೆಗೆ ಬೆಸ್ಟ್ ಫೇಸ್ ಪ್ಯಾಕ್ | Boldsky

  • 6 years ago
ಪ್ರತಿಯೊಬ್ಬರೂ ತಮ್ಮ ಮುಖದ ಮೇಲೆ ಯಾವುದೇ ಕಲೆ ಮತ್ತು ಮೊಡವೆಗಳಿಲ್ಲದೆ ಕೋಮಲವಾಗಿರಬೇಕು. ನೋಡಲು ಆಕರ್ಷಕ ಹಾಗೂ ಕಾಂತಿಯಿಂದ ಕೂಡಿರಬೇಕೆಂದು ಬಯಸುತ್ತಾರೆ. ಹಾಗೊಮ್ಮೆ ಮೊಡವೆಗಳಿಂದ ಆಗುವ ಕಲೆ ಹಾಗೂ ಮೊಡವೆಗಳಿದ್ದರೆ ಅದು ಆಕರ್ಷಣೆಗೆ ಅಡ್ಡಿ ಮಾಡುತ್ತದೆ ಎನ್ನುವ ಭಾವವನ್ನು ತಳೆದಿರುತ್ತಾರೆ. ಹಾಗಾಗಿ ಮುಖದ ಮೇಲೆ ಏನಾದರೂ ಕಲೆಯುಂಟಾದರೆ ಅದರ ನಿವಾರಣೆಗಾಗಿ ಅನೇಕ ಪರಿಹಾರೋಪಾಯಗಳನ್ನು ಮಾಡುತ್ತಾರೆ. ಕಲುಷಿತ ಗಾಳಿ, ಆಹಾರ ಕ್ರಮ ಮತ್ತು ಹಾರ್ಮೋನ್‍ಗಳ ವ್ಯತ್ಯಾಸದಿಂದ ಮೊಡವೆ ಹಾಗೂ ಅದರಿಂದ ಕಲೆಗಳುಂಟಾಗುವುದು ಸಹಜ. ಆ ಕಲೆಗಳ ನಿವಾರಣೆಗಾಗಿ ದುಬಾರಿ ಬೆಲೆಯ ಚಿಕಿತ್ಸೆಗೆ ಒಳಪಡುವುದು ಅಥವಾ ಪದೇ ಪದೇ ಸೌಂದರ್ಯ ತಜ್ಞರಿಂದ ಆರೈಕೆ ಮಾಡಿಸಿಕೊಳ್ಳುವುದು ಸಹಜ. ಇದರ ಬದಲು ಮನೆಯಲ್ಲಿಯೇ ಕೆಲವು ಆರೈಕೆಗಳನ್ನು ಮಾಡಿಕೊಳ್ಳಬಹುದು. ಅವುಗಳ ಪರಿಚಯ ನಮಗಿರಬೇಕಷ್ಟೆ. ಹೌದು ಮೊಡವೆಯ ಕಲೆಗಳನ್ನು ಮನೆಯಲ್ಲಿಯೇ ನಿವಾರಿಸಲು ಸಿಂಪಲ್ ಆಗಿರುವಂತಹ ಮನೆಮದ್ದನ್ನು ವಿಡಿಯೋ ದಲ್ಲಿ ನೀಡಿದ್ದೇವೆ.. ನೀವೂ ಒಮ್ಮೆ ಪ್ರಯತ್ನಿಸಿ ನೋಡಿ

Recommended