Karnataka Assembly Elections 2018 : ಮೈಸೂರಿನಲ್ಲಿ ಸ್ಟಾರ್ ನಟರ ಪ್ರಚಾರ ಜೋರು

  • 6 years ago
Ahead of Karnataka assembly elections 2018 many star campaigners will start their campaign in Chamundeshwari constituency in Mysuru. Challenging star Darshan, Sudeep, Srujan Lokesh, Congress media head Ramya etc will be campaigning for Congress and Siddaramaiah.


ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರ ಮಾತ್ರ ಈಗಾಗಲೇ ರಂಗೇರಿದ್ದು ಪ್ರಚಾರಕ್ಕೆ ಚಿತ್ರನಟರನ್ನು ಬಳಸಿಕೊಳ್ಳಲು ವೇದಿಕೆ ಸಜ್ಜಾಗುತ್ತಿದೆ. ಈ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಇದರೊಟ್ಟಿಗೆ ವಿರೋಧಿಗಳ ಲೆಕ್ಕಾಚಾರವೂ ಬದಲಾಗಿದೆ. ಜೆಡಿಎಸ್ ನ ಹಾಲಿ ಶಾಸಕ ಜಿ. ಟಿ ದೇವೇಗೌಡ ಅವರು ತಂತ್ರಗಳನ್ನು ಬದಲಾಯಿಸಿಕೊಂಡು ತಿರುಗೇಟು ನೀಡಲು ಸಜ್ಜಾಗುತ್ತಿದ್ದಾರೆ. ಬಿಜೆಪಿ ತನ್ನ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ವತಿಯಿಂದ ಕ್ಷೇತ್ರದಲ್ಲಿ ಈಗಾಗಲೇ ಒಂದು ಸುತ್ತಿನ ಬೃಹತ್ ಸಮಾವೇಶಗಳು ನಡೆದಿವೆ. ಮತದಾರರನ್ನು ಸೆಳೆಯಲು ಚಿತ್ರನಟರ ಮೊರೆ ಹೋಗಿರುವುದು ಈ ಕ್ಷೇತ್ರದಲ್ಲಿ ಈಗ ನಡೆದಿರುವ ಕುತೂಹಲಕಾರಿ ಬೆಳವಣಿಗೆ.

Recommended