ವಿರೋಧ ಪಕ್ಷದ ಅಧ್ಯಕ್ಷನಿಗೇ ಗಣರಾಜ್ಯೋತ್ಸವದಲ್ಲಿ ಅವಮಾನ | Oneindia Kannada

  • 6 years ago
ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮ ವಿಶೇಷವಾಗಿತ್ತು. ಸಮಾರಂಭದಲ್ಲಿ 10 ಆಸಿಯಾನ್ ದೇಶಗಳ ಮುಖಸ್ಥರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.ಆದರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಅವಮಾನಿಸಿದ ಘಟನೆಯೂ ನಡೆಯಿತು. ವಿರೋಧ ಪಕ್ಷದ ಮುಖ್ಯಸ್ಥರಿಗೆ ನಾಲ್ಕನೇ ಸಾಲಿನ ಆಸನ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ನಾಲ್ಕನೇ ಸಾಲಿನ ಆಸನದಲ್ಲಿ ಕುಳಿತುಕೊಂಡು ರಾಹುಲ್ ಗಾಂಧಿ ಇಡೀ ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಿಸಬೇಕಾಯಿತು. ಇದು ಕಾಂಗ್ರೆಸ್ ಕಣ್ಣು ಕೆಂಪಗಾಗಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಸರಕಾರದ ನಡೆಯನ್ನು ಖಂಡಿಸಿದ್ದಾರೆ.

ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾಗ ಯಾವತ್ತೂ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ರಾಹುಲ್ ಗಾಂಧಿಗೆ ಪ್ರತಿ ವರ್ಷ ಆಹ್ವಾನ ಇರುತ್ತಿತ್ತಾದರೂ ಅವರು ಕಾರ್ಯಕ್ರಮಗಳಿಗೆ ಹಾಜರಾಗುತ್ತಿರಲಿಲ್ಲ. ಈ ಬಾರಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುತ್ತಿದ್ದಂತೆ ನಾಲ್ಕನೇ ಸಾಲಿನ ಆಸನ ನೀಡಿ ಅವಮಾನಿಸಲಾಗಿದೆ.ವಿರೋಧ ಪಕ್ಷದ ಮುಖ್ಯಸ್ಥರಿಗೆ ನಾಲ್ಕನೇ ಸಾಲಿನ ಆಸನ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ .

Congress president Rahul Gandhi has been insulted in Republic Day parade 2018. Usually his family used to get first row seat in VVIP enclosure. But this year government has been given fourth row seat to Rahul Gandhi.

Recommended