ನ್ನಡಿಗರಿಗೆ ಸಂಕ್ರಾಂತಿ ಹಬ್ಬಕ್ಕೆ ಶುಭಹಾರೈಸಿದ ಪ್ರಧಾನಿ ಮೋದಿ | Oneindia Kannada

  • 6 years ago
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಮಕರ ಸಂಕ್ರಾಂತ ಹಬ್ಬದ ಶುಭಹಾರೈಕೆ ಸಂದೇಶವನ್ನು ಕನ್ನಡಲ್ಲಿ ನೀಡಿದ್ದಾರೆ. ಸಮಸ್ತ ಕನ್ನಡಿಗರಿಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.'ಕರ್ನಾಟಕದ ನನ್ನ ಸೋದರ,ಸೋದರಿಯರಿಗೆ ಸಂಕ್ರಾಂತಿ ಶುಭಾಶಯಗಳು,ಈ ಸುಗ್ಗಿಯ ಹಬ್ಬ ಎಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ ಎಂದು ನಾನು ಹಾರೈಸುತ್ತೇನೆ' ಎಂದು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಭಾರತದಾದ್ಯಂತ ಜನರು ವಿವಿಧ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದು, ಹಬ್ಬದ ಸಂಭ್ರದಲ್ಲಿರುವ ಜನತೆಗೆ ಈ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.

ಭಾರತದಲ್ಲಿರುವ ವೈವಿಧ್ಯತೆಯೇ ದೊಡ್ಡ ಶಕ್ತಿಯಾಗಿದೆ. ಈ ಬಾರಿಯ ಹಬ್ಬ ಶ್ರಮದಾಯಕ ರೈತರಿಗೆ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ಆಯಾ ಪ್ರದೇಶದ ಜನತೆಗೆ ಮುಟ್ಟುವಂತೆ ಆಯಾ ಭಾಷೆಯಲ್ಲಿ ಹಾಗೂ ಇಂಗ್ಲೀಷ್ ನಲ್ಲಿ ಪ್ರತ್ಯೇಕವಾಗಿ ಭಾನುವಾರದಂದೇ ಟ್ವೀಟ್ ಮಾಡಿ ಶುಭ ಕೋರಿದ್ದರು.
Prime Minister Narendra Modi has wished people from all over the country in their regional languages as the whole country is celebrating different festivals today .

Recommended