ರಾಕಿಂಗ್ ಸ್ಟಾರ್ ಯಶ್ ತನ್ನ ಹೊಸ ಮನೆ ಬಗೆಗಿನ ಗಾಸಿಪ್ ಗೆ ಖಡಕ್ ಉತ್ತರ | Filmibeat Kannada
  • 6 years ago
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿ ಒಂದು ವರ್ಷ ಕಳೆದಿದೆ. ಇಬ್ಬರು ಅನ್ಯೋನ್ಯವಾಗಿ, ಸಂತೋಷವಾಗಿ ತಮ್ಮ ಲೈಫ್ ನ ಎಂಜಾಯ್ ಮಾಡ್ತಿದ್ದಾರೆ. ಯಶ್ ಕುಟುಂಬದ ಜೊತೆ ರಾಧಿಕಾ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಯಶ್ ಹುಟ್ಟುಹಬ್ಬವನ್ನ ಕುಟುಂಬವೆಲ್ಲಾ ಸೇರಿ ಅದ್ಧೂರಿಯಾಗಿ ಆಚರಿಸಿದೆ. ಅದಕ್ಕೂ ಮುಂಚೆ ಪತ್ನಿ, ತಂದೆ-ತಾಯಿ ಮತ್ತು ತಂಗಿಗೋಸ್ಕರ ಮೂರು ಬೆಂಜ್ ಕಾರನ್ನ ಯಶ್ ಖರೀದಿಸಿದ್ದರು. ಹೀಗೆ, ಖುಷಿ ಖುಷಿಯಾಗಿರುವ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಬಗ್ಗೆ ಒಂದು ಆರೋಪ ಕೇಳಿ ಬರುತ್ತಿತ್ತು. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿಯೂ ಈ ವಿಷ್ಯ ಚರ್ಚೆಯಾಗಿತ್ತು. ಅದೇನಪ್ಪಾ ಅಂದ್ರೆ, ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಬೇರೆ ಮನೆ ಮಾಡಿದ್ದಾರೆ. ಕುಟುಂಬದಲ್ಲಿ ಮನಸ್ತಾಪ ಮೂಡಿರುವ ಹಿನ್ನೆಲೆ ಈ ನಿರ್ಧಾರ ಮಾಡಿದ್ದಾರೆ ಎಂಬ ಮಾತು ಎಲ್ಲೆಡೆ ಚರ್ಚೆಯಾಗುತ್ತಿತ್ತು. ಆದ್ರೆ, ಈ ಬಗ್ಗೆ ಯಶ್ ಕುಟುಂಬದವರು ಎಲ್ಲಿಯೂ ಮಾತನಾಡಿರಲಿಲ್ಲ. ಇತ್ತೀಚೆಗಷ್ಟೇ ಟಿವಿ ಸಂದರ್ಶನದಲ್ಲಿ ಯಶ್ ಈ ಬಗ್ಗೆ ಮಾತನಾಡಿದ್ದು, ಎಲ್ಲ ಅನುಮಾನಗಳಿಗೂ ಖಡಕ್ ಆಗಿ ಉತ್ತರ ನೀಡಿದ್ದಾರೆ.
Sandalwood’s popular couple Yash and Radhika Pandit have recently purchased a new home in Bengaluru. After the completion of the interior works, they will shift to the new home. There were few gossips spread about their new home & now Yash gives clarity to all those Gossips.
Recommended