ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನ ಡಿಫರೆಂಟ್ ಲುಕ್ ನಲ್ಲಿ ಪ್ರತ್ಯಕ್ಷ | Filmibeat Kannada

  • 6 years ago
ಕನ್ನಡ ಸಿನಿಮಾರಂಗದ ಪದ್ಮಾವತಿ, ಸ್ಯಾಂಡಲ್ ವುಡ್ ಕ್ವೀನ್ ಅಂತೆಲ್ಲಾ ಅಭಿಮಾನಿಗಳಿಂದ ಕರೆಸಿಕೊಂಡ ನಟಿ ರಮ್ಯಾ. ಚಿತ್ರರಂಗ ಬಿಟ್ಟು ಸಾಕಷ್ಟು ದಿನಗಳು ಕಳೆಯುತ್ತಾ ಬಂದರೂ ಕೂಡ ಅಭಿಮಾನಿಗಳು ಮಾತ್ರ ರಮ್ಯಾ ಅವರ ಧ್ಯಾನದಲ್ಲೇ ಇದ್ದಾರೆ. ನಿರಾಭರಣ ಸುಂದರಿಯಾಗಿ ನೋಡುಗರನ್ನ ಸೆಳೆಯುತ್ತಿದ್ದ ರಮ್ಯಾ ಅವರ ಉದ್ದವಾದ ಕೇಶರಾಶಿಗೆ ಕತ್ತರಿ ಹಾಕಿದ್ದಾರೆ. ರಮ್ಯಾ ಅವರ ಅಭಿಮಾನಿಗಳಿಗೆ ಅವರು ನೀಳವಾದ ಕೂದಲಿನಲ್ಲಿ ಕಾಣಿಸಿಕೊಂಡರೆ ತುಂಬಾನೇ ಇಷ್ಟವಾಗುತ್ತಿತ್ತು. ಆದರೆ ಈಗ ರಮ್ಯಾ ಬಾಬ್ ಕಟ್ ಬೇಬಿ ಆಗಿದ್ದಾರೆ. ಮಾಡ್ರನ್ ಡ್ರಸ್ ನಿಂದ ಕಾಟನ್ ಕುರ್ತಾ ಹಾಗೂ ಕಾಟನ್ ಸೀರಿಗೆ ಶಿಫ್ಟ್ ಆಗಿದ್ದ ರಮ್ಯಾ ಈಗ ತಮ್ಮ ಹೇರ್ ಸ್ಟೈಲ್ ಅನ್ನು ಬದಲಾಯಿಸಿಕೊಂಡಿದ್ದಾರೆ.ಇಷ್ಟು ದಿನಗಳ ಕಾಲ ಲಾಂಗ್ ಹೇರ್ ನಲ್ಲಿ ಕಾಣಿಸಿಕೊಂಡಿದ್ದ ರಮ್ಯಾ ಬಾಬ್ ಕಟ್ ನಲ್ಲೂ ಸುಂದವಾಗಿಯೇ ಕಾಣಿಸುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ರಮ್ಯಾ ಅವರನ್ನು ಈ ಲುಕ್ ನಲ್ಲಿ ನೋಡಲು ಸ್ವಲ್ಪ ಕಷ್ಟವೇ ಆಗಬಹುದು. ಆದರೆ ಕೂದಲಿಗಂತು ಕತ್ತರಿ ಬಿದ್ದಿರುವುದು ಕನ್ಫರ್ಮ್.
Kannada actress Ramya aka Divya Spandana has changed her look, Ramya has appeared in the bob cut Hair style in a recent seminar.

Recommended