ದೀಪಕ್ ರಾವ್ ಶವಯಾತ್ರೆಗೆ ಬಿಗಿಪಟ್ಟು , ಸ್ಥಳದಲ್ಲಿ ಉದ್ವಿಗ್ನ ವಾತಾವರಣ | Oneindia Kannada

  • 6 years ago
ಮಂಗಳೂರಿನ ಕಾಟಿಪಳ್ಳದಲ್ಲಿ ನಿನ್ನೆ (ಜನವರಿ 3) ಬರ್ಬರವಾಗಿ ಹತ್ಯೆಗೀಡಾದ ದೀಪಕ್ ರಾವ್ ಶವಯಾತ್ರೆಗೆ ಬಿಜೆಪಿ ಹಾಗು ಹಿಂದೂ ಸಂಘಟನೆಗಳ ಕಾರ್ಯಕರ್ತರು ನಡೆಸಿದ್ದ ಸಿದ್ದತೆಗೆ ಪೊಲೀಸರು ತಡೆದಿದ್ದಾರೆ. ದೀಪಕ್ ರಾವ್ ಮೃತ ದೇಹವನ್ನು ಯಾವುದೇ ಸದ್ದಿಲ್ಲದೇ ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿರುವ ಅವರ ಮನೆಗೆ ಶಿಫ್ಟ್ ಮಾಡಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧ ಬಿಜೆಪಿ ಹಾಗು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದು, ದೀಪಕ್ ರಾವ್ ಅವರ ಮೃತ ದೇಹದ ಶವಯಾತ್ರೆಗೆ ಪಟ್ಟು ಹಿಡಿದಿದ್ದಾರೆ. ದೀಪಕ್ ರಾವ್ ಅವರ ಮೃತ ದೇಹದ ಶವಯಾತ್ರೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸುರತ್ಕಲ್, ಕಾಟಿಪಳ್ಳ ಪರಿಸರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಜಾರಿಯ ಹೊರತಾಗಿಯೂ ಶವಯಾತ್ರೆಗೆ ಸಿದ್ಧತೆ ನಡೆಸಲಾಗಿತ್ತು. ಬಂದೋದಸ್ತಗೆ 5 ಕೆಎಸ್ ಆರ್ ಪಿ, 6 ಸಿಎಆರ್ ತುಕಡಿ, 500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಗೊಳಿಸಲಾಗಿದೆ.


Man killed with sharp weapons near Mangaluru, RSS says he was BJP, Bajrang Dal volunteer Deepak Rao was on a motorcycle when four men in a car forced him to stop and attacked him with sharp weapons. The local police are avoiding funeral procession due to expectancy of local riots.

Recommended