ಹೆಲ್ಮೆಟ್ ಮೇಲೆ ಐಎಸ್ಐ ಗುರುತು ಕಡ್ಡಾಯ , ಇಲ್ಲವಾದಲ್ಲಿ ದಂಡ ಖಚಿತ ! | Oneindia Kannada

  • 6 years ago
ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದಾಕ್ಷಣ ಹೆಲ್ಮೆಟ್ ಮಾರಾಟಗಾರರಿಗೆ ಹಬ್ಬ ಎಂಬಂತಾಗಿತ್ತು . ಜನರು ಹೆಲ್ಮೆಟ್ ಅಂಗಡಿಗಳ ಮುಂದೆ ಮುಗಿ ಬಿದ್ದು ನಿಂತಿದ್ದು ನಿಮಗೆಲ್ಲ ಗೊತ್ತೇ ಇದೆ . ಹೆಲ್ಮೆಟ್ ಅಂಗಡಿಗೆ ಹೋದ ಗ್ರಾಹಕ ಹೆಲ್ಮೆಟ್ ಬಣ್ಣ ಹಾಗು ಡಿಸೈನ್ ನೋಡಿ ಹೆಲ್ಮೆಟ್ ಆಯ್ಕೆ ಮಾಡಿ ಅದನ್ನು ಖರೀದಿಸುತ್ತಿದ್ದ . ಇನ್ನ ಕೆಲವರು ಯಾವುದೋ ಒಂದು ಮನೆಯಲ್ಲೇ ಉಳಿದಿದ್ದ ಹಳೆಯ ಹೆಲ್ಮೆಟ್ ಹಾಕಿ ಗಾಡಿ ಓಡಿಸಲು ಶುರು ಮಾಡಿದರು . ಪೊಲೀಸರು ಸಹ ಯಾವುದಾದರೂ ಒಂದು ಹೆಲ್ಮೆಟ್ ಹಾಕಿ ಹೋದರೆ ಸಾಕು ಅವರನ್ನು ಹಿಡಿಯುವ ಗೋಜಿಗೆ ಹೋಗುತ್ತಿರಲಿಲ್ಲ . ಆದರೆ ಮೈಸೂರಿನಲ್ಲಿ ಪೊಲೀಸರು ಹೆಲ್ಮೆಟ್ ಹಾಕಿದವರನ್ನು ಸಹ ನಿಲ್ಲಿಸಿ ಹೆಲ್ಮೆಟ್ ನಲ್ಲಿ ಐಎಸ್ಐ ಮಾರ್ಕ್ ಇದೆಯಾ ಎಂದು ಪರಿಶೀಲಿಸುತ್ತಿದ್ದಾರೆ . ಒಂದು ವೇಳೆ ಮಾರ್ಕ್ ಇಲ್ಲವಾದಲ್ಲಿ ಹೆಲ್ಮೆಟ್ ಅಲ್ಲಿಯೇ ವಶಪಡಿಸಿಕೊಂಡು ಫೈನ್ ಹಾಕುತ್ತಿದ್ದಾರೆ .

You can no longer ride your 2 wheeler with your broken or cheap helmet anymore . ISI mark on helmet has been made mandatory and police in Mysore are fining people who are riding with their helmets on but without the ISI mark on it .