ಅಮಿತ್ ಶಾ ಐಡಿಯಾ ಎದುರು ಹಾರ್ದಿಕ್ ಪಟೇಲ್ ಗೆ ಮುಖಭಂಗ | Oneindia Kannada

  • 6 years ago
Gujarat Deputy CM Nitinbhai Patel has won his “battle of prestige” with the BJP leadership. Patel assumed charge of his office on Sunday (Dec 31) after Amit Shah accepted his demand of Fiance portfolio. So, Hardik Patel fails to take advantage of BJP internal crisis.


ಜಿಗ್ನೇಶ್ ಮೆವಾನಿ, ಅಲ್ಪೇಶ್ ಠಾಕೂರ್ ಅವರನ್ನು ಜೊತೆಗೆ ಸೇರಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲಾಗದೇ ಕೈಕೈ ಹಿಸುಕಿಕೊಳ್ಳುತ್ತಿರುವ ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ನಾಯಕ ಹಾರ್ದಿಕ್ ಪಟೇಲ್, ಬಿಜೆಪಿ ವಿರುದ್ದ ಶಕುನಿಯಾಟ ಆಡಲು ಹೋಗಿ ಸದ್ಯದ ಮಟ್ಟಿಗೆ ಮುಖಭಂಗ ಅನುಭವಿಸಿದ್ದಾರೆ. ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಖಾತೆ ಹಂಚಿಕೆಯ ವಿಚಾರದಲ್ಲಿ ತೆಗೆದ ಕ್ಯಾತೆಯನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿಮಾಡುವಲ್ಲಿ ಯಶಸ್ವಿಯಾದ ಹಾರ್ದಿಕ್, ಅಷ್ಟೇ ವೇಗದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.ನಿಮ್ಮ ಅಸಮಾಧಾನ ಏನೇ ಇದ್ದರೂ ಅದನ್ನು ಸರಿಪಡಿಸೋಣ, ಮೊದಲು ಅಧಿಕಾರ ಸ್ವೀಕರಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಟ್ಟುನಿಟ್ಟಿನ ಸೂಚನೆಗೆ ತಲೆಬಾಗಿದ ನಿತಿನ್ ಪಟೇಲ್ ಭಾನುವಾರ (ಡಿ 31) ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಜೊತೆಗೆ, ತಾವು ಬಯಸಿದ್ದ ಹಣಕಾಸು ಸಚಿವ ಸ್ಥಾನವನ್ನು ನೀಡುವ ಖಚಿತ ಭರವಸೆ ಅಮಿತ್ ಶಾ ನೀಡಿದ ನಂತರ ನಿತಿನ್ ಪಟೇಲ್, ಶಾ ಮತ್ತು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಆ ಮೂಲಕ, ಪಕ್ಷದ ಆಂತರಿಕ ವಿಚಾರದಲ್ಲಿ ಕಡ್ಡಿಯಾಡಿಸಲು ಬಂದ ಹಾರ್ದಿಕ್ ಪಟೇಲ್ ಪ್ರಯತ್ನಕ್ಕೆ ಫಲ ಸಿಗದಂತೆ ನೋಡಿಕೊಳ್ಳುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದಾರೆ.

Recommended