ಕರ್ನಾಟಕದ ಈ ಮೌಗ್ಲಿಗೆ ಕೇವಲ 2 ವರ್ಷ ವಯಸ್ಸು, ಆದರೆ ಆತನ ಕಥೆ ನಂಬಲಸಾಧ್ಯ! | Oneindia Kannada

  • 7 years ago
ನಾವು ಸಣ್ಣವರಿದ್ದಾಗ ಪ್ರತಿ ಭಾನುವಾರ ಜಂಗಲ್ ಬುಕ್ ನೋಡೊದನ್ನ ಮರಿಯುತ್ತಿರಲಿಲ್ಲ . ಅದರಲ್ಲಿ ಬರುತ್ತಿದ್ದ ಬಲ್ಲೂ , ಭಾಗೀರ , ಮೌಗ್ಲಿ ಎಂದರೆ ನಮ್ಮೆಲ್ಲರಿಗೂ ಪಂಚ ಪ್ರಾಣ . ಈಗ ನಿಜ ಜೀವನದ ಮೌಗ್ಲಿ ಒಬ್ಬ ಬೆಳಕಿಗೆ ಬಂದಿದ್ದಾನೆ . ಅಷ್ಟಕ್ಕೂ ಈತ ಕೇವಲ ೨ ವರ್ಷದ ಬಾಲಕ . ಈ ಪುಟ್ಟ ಪೋರನ ಹೆಸರು ಸಮರ್ಥ್ ಬಂಗಾರಿ . ವಿಶೇಷ ಎಂದರೆ ಈತ ಕನ್ನಡದ ಹುಡುಗ . ಈತ ಮಲಗೋದು ಆಡೋದು ಎಲ್ಲಾ ಅಕ್ಷರ ಶಹ ಮಂಗಗಳ ಜೊತೆ. ಮಂಗಗಳಿಗೂ ಸಹ ಸಮರ್ಥ್ ಎಂದರೆ ಬಹಳ ಪ್ರೀತಿ . ಈತ ಆ ಮಂಗಗಳನ್ನು ಫ್ರೆಂಡ್ಸ್ ರೀತಿ ನೋಡುತ್ತಾನೆ . ಕೆಲುವೊಮ್ಮೆ ಅವುಗಳಿಗೆ ಹೊಡೆಯುತ್ತಾನೆ . ಆದರೂ ಅವುಗಳು ಈತನ ಮೇಲೆ ರೇಗುವುದಿಲ್ಲ , ಕೋಪವೂ ಮಾಡಿಕೊಳ್ಳುವುದಿಲ್ಲ . ಬದಲಿಗೆ ಬೇರೆಯಾರು ಅವನನ್ನು ಅವುಗಳಿಂದ ಬೇರೆ ಮಾಡಲು ಬಂದರೆ ಅವರ ಮೇಲೆ ಹಾರಿ ಪರಚಲು ಯತ್ನಿಸುತ್ತವೆ .

two year old boy Samarth Bangari of Allapur village in Kundagol taluk, Dharwad, these langurs are his soulmate. Samarth literally eats, sleeps and plays with these wild langurs the whole time with no fear what so ever. Samarth knows no fear while he is with the langurs.