ಬಿ ಎಸ್ ಯಡಿಯೂರಪ್ಪ ಮೇಲೆ ಎಚ್ ಡಿ ಕುಮಾರಸ್ವಾಮಿ ಆಕ್ರೋಶ | Oneindia Kannada

  • 6 years ago
Water has become a key word for the BJP in Karnataka. As the party prepares to face the electorate ahead of the Karnataka Assembly Elections 2018, raising the water issue becomes exceptionally necessary at least in Northern Karnataka region. Today H D Kumaraswamy speaks to Media at JDS Headquarters JP Bhavan. H D Kumaraswamy lambasted B S Yeddyurappa, Amit Shah & Goa C M Manohar Parrikar. Watch Video.


2018 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಶಾಲಿ ಅಸ್ತ್ರಗಳಲ್ಲಿ 'ನೀರು' ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರ ನೀರಿನ ಸಮಸ್ಯೆಯನ್ನು ನೀಗಿಸುವ ಮಹಾದಾಯಿ ಯೋಜನೆ ಇದೀಗ ರಾಜಕೀಯ ಪಕ್ಷಗಳಿಗೆ ಮತಗಳಿಸುವ ಸಾಧನವೂ ಆಗಿದೆ.ಕಳೆದ ಎರಡೂವರೆ ವರ್ಷಗಳಿಂದ ಕಳಸಾ ಬಂಡೂರಿ ನಾಲೆ ಜೋಡಣೆ ಕುರಿತು ಹೋರಾಟ ನಡೆಯುತ್ತಲೇ ಇದ್ದರೂ ತಲೆಕೆಡಿಸಿಕೊಳ್ಳದವರೆಲ್ಲ ಈಗ ಏಕಾಏಕಿ ಮಹದಾಯಿಯನ್ನು ಅಪ್ಪಿಕೊಳ್ಳುತ್ತಿರುವುದೇಕೆ ಎಂಬುದು ಗುಟ್ಟಾಗಿ ಉಳಿದಿಲ್ಲ.ಇದೀಗ ಗೋವಾ ಸರ್ಕಾರದೊಂದಿಗೆ ಮಾತನಾಡಿ ಮಹದಾಯಿ ಕುರಿತ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಮುಂದಾಗಿರುವ ಬಿಜೆಪಿ, ಈ ಬಾರಿಯ ಚುನಾವಣೆಗೆ ನೀರನ್ನೇ ತನ್ನ ಬತ್ತಳಿಕೆಯ ಪ್ರಮುಖ ಬಾಣವನ್ನಾಗಿಸಿಕೊಂಡರೆ ಅಚ್ಚರಿಯೇನಿಲ್ಲ.ಇಂದು ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಎಚ್ ಡಿ ಕುಮಾರಸ್ವಾಮಿಯವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಮಹದಾಯಿ ವಿಚಾರವಾಗಿ ಬಿ ಎಸ್ ಯಡಿಯೂರಪ್ಪ ಅಮಿತ್ ಶಾ ಹಾಗು ಗೋವಾ ಸಿ ಎಂ ಮನೋಹರ್ ಪರ್ರಿಕರ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನಷ್ಟು ಮಾಹಿತಿಗೆ ಈ ವಿಡಿಯೋ ನೋಡಿ

Recommended