ವಿರಾಟ್ ಕೋಹ್ಲಿ ಅನುಷ್ಕಾ ಶರ್ಮಾ ಜೋಡಿ ಕರ್ನಾಟಕದಲ್ಲಿ! | Filmibeat Kannada

  • 6 years ago
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ಡಿಸೆಂಬರ್ 11ಕ್ಕೆ ನಡೆದಿದೆ. ಮದುವೆ ಆದ ಮೇಲೆ ಸಾಮಾನ್ಯವಾಗಿ ಎಲ್ಲರೂ ಹನಿಮೂನ್ ಗೆ ಹೋಗುವ ಹಾಗೆ ವಿರಾಟ್ ಮತ್ತು ಅನುಷ್ಕಾ ಕೂಡ ಹೋಗಿದ್ದರು. ಜೊತೆಗೆ ಹನಿಮೂನ್ ಫೋಟೋವನ್ನು ಅನುಷ್ಕಾ ತಮ್ಮ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿ 'ಇದು ಅಕ್ಷರಶಃ ಸ್ವರ್ಗ' ಅಂತ ಬರೆದುಕೊಂಡಿದ್ದರು. ಇಟಲಿಯಲ್ಲಿ ಮದುವೆ ಆದ ಅನುಷ್ಕಾ - ವಿರಾಟ್ ಈಗ ವಿದೇಶ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಅದರಲ್ಲಿಯೂ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸುತ್ತಾಡುತ್ತಿದ್ದಾರೆ. ಶಿವಮೊಗ್ಗ, ತುಮಕೂರು, ಶೃಂಗೇರಿಯ ಬೀದಿಗಳಲ್ಲಿ ಈ ನವ ಜೋಡಿ ವಿಹರಿಸುತ್ತಿದೆ. ಈ ವಿಷಯ ಕೇಳಿದರೆ ಇದು ನಿಜವೇ ಎಂದು ಆಶ್ಚರ್ಯ ಆಗುತ್ತದೆ. ಆದರೆ ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಮಗೂ ಈ ಸುದ್ದಿ ಕೇಳಿ ಸಣ್ಣ ಕುತೂಹಲ ಹುಟ್ಟಿರಬಹುದು..
Indian cricket team's captain Virat Kohli and Bollywood actress Anushka Sharma have tied the knot in Italy on December 11th. And Now Virat and Anushka's honeymoon photo has been trolled as it is looking like they are roaming in streets of Shivamogga, Sringeri and Tumakuru.

Recommended