ಸಾಲ ವಾಪಸ್ ಕೊಡದಿದ್ದಕ್ಕೆ ಶಾಲಾ ಪ್ರಾಂಶುಪಾಲರಿಗೆ ಸೈಕಲ್ ಚೈನ್ ನಿಂದ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

  • 6 years ago
ಬೆಂಗಳೂರಿನ ಸಂಗನಾಯಕನ ಹಳ್ಳಿಯಲ್ಲಿನ ಆರ್ಯನ್ ಶಾಲೆಯಲ್ಲಿ ನಡೆದ ಈ ದಾರುಣ ಘಟನೆ ಈಗ ಸಿ ಸಿ ಟಿ ವಿ ಯಲ್ಲಿ ಸೆರೆಯಾಗಿದೆ . ಆರ್ಯನ್ ಶಾಲೆಯ ಪ್ರಾಂಶುಪಾಲರಿಗೆ ವ್ಯಕ್ತಿಯೊಬ್ಬ ಶಾಲೆಗೆ ನುಗ್ಗಿ ಥಳಿಸಿರುವ ವಿಡಿಯೋ ಈಗ ವೈರಲ್ ಆಗಿದೆ . ಆಶಾ ಎಂಬುವವರು ರಾಮಕೃಷ್ಣಪ್ಪ ಎಂಬುವವರ ಬಳಿ ಸುಮಾರು ೭೦ ಸಾವಿರ ದುಡ್ಡನು ಸಾಲ ಪಡೆದಿರುತ್ತಾರೆ . ಆದರೆ ಬಡ್ಡಿ ಕಟ್ಟುವಾಗ ತಡ ಮಾಡಿರುತ್ತಾರೆ . ಹೀಗಾಗಿ ಸಾಲ ವಸೂಲಿ ಮಾಡುವ ಸಲುವಾಗಿ ಶಾಲೆಗೆ ನುಗ್ಗಿದ ರಾಮಕೃಷ್ಣಪ್ಪ ಆಶಾರನ್ನು ಥಳಿಸಿದ್ದಾನೆ . ಒಂದು ಹಂತಕ್ಕೆ ಹೋಗಿ ನಂತರ ಜೇಬಿನಿಂದ ಸೈಕಲ್ ಚೈನ್ ತೆಗೆದು ಆಶಾರನ್ನು ಸೈಕಲ್ ಚೈನ್ ನಿಂದ ಹೊಡೆದಿದ್ದಾನೆ . ಪ್ರಕರಣವನ್ನು ರಾಜನಕುಂಟೆ ಪೊಲೀಸರು ಧಾಖಲಿಸಿದ್ದಾರೆ . ಹಾಗು ರಾಮಕೃಷ್ಣಪ್ಪ ಕಣ್ಮರೆಯಾಗಿದ್ದಾನೆ .


Shocking video of a money lender thrashing a school principal with a cycle chain is monstrous and the man is reportedly a BJP worker.