ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ | Oneindia Kannada

  • 6 years ago
"ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಆಗುತ್ತದೆ. ಕಾಂಗ್ರೆಸ್-ಜೆಡಿಎಸ್ ಸೇರಿ ಸರಕಾರವನ್ನು ರಚಿಸುತ್ತವೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಕಾಂಗ್ರೆಸ್ ನಿಂದ ದಿನೇಶ್ ಗುಂಡೂರಾವ್ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿವೆ" ಎಂದು ಅಚಲವಾದ ವಿಶ್ವಾಸದಿಂದ ಭವಿಷ್ಯ ನುಡಿದರು ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ.ಗುಜರಾತ್ ಚುನಾವಣೆ ಫಲಿತಾಂಶದ ಬಗ್ಗೆ ಒಂದು ದಿನ ಮೊದಲೇ ಹೀಗೇ ಆಗುತ್ತದೆ ಎಂದು ನಿಖರವಾಗಿ ಭವಿಷ್ಯ ನುಡಿದಿದ್ದರು ಪ್ರಕಾಶ್ ಅಮ್ಮಣ್ಣಾಯ. "ನಾಳೆ ಗುಜರಾತಿನಲ್ಲಿ ಬೆಳಗ್ಗೆ 7.17ಕ್ಕೆ ಧನು ಲಗ್ನದಲ್ಲಿ ಸೂರ್ಯೋದಯ ಆಗಲಿದೆ. ಲಗ್ನಾಧಿಪತಿ ಲಾಭ ಸ್ಥಾನದಲ್ಲಿ ಪಂಚಮಾಧಿಪತಿ ಜತೆಗೆ ಇದ್ದಾನೆ". "ಆದರೆ ಲಗ್ನದಲ್ಲಿ ರವಿ- ಶನಿ ಗ್ರಹ ಯುದ್ಧ ಸ್ಥಿತಿ. ಪರಿಣಾಮ- ಬಹಳ ಯುದ್ಧ ಸ್ಥಿತಿ ಸುಮಾರು ಹತ್ತು ಗಂಟೆವರೆಗಿದೆ. ಬಿಜೆಪಿಯ ಹಿನ್ನಡೆಗಳೇ ಎದ್ದು ಕಾಣಬಹುದು. ಹತ್ತು ಗಂಟೆ ನಂತರ ಎಲ್ಲಾ ಮಾಧ್ಯಮಗಳ ಲೆಕ್ಕಾಚಾರ ಬುಡ ಮೇಲಾಗಬಹುದು. ಪೊರಕೆಗಳಿಗೆ ಡಿಮಾಂಡ್ ಹೆಚ್ಚಾದೀತು. ಕೊನೆಗೆ ಫಲಶ್ರುತಿ...sweeping BJPಗೆ" ಫೇಸ್ ಬುಕ್ ಪೋಸ್ಟ್ ಹಾಕಿದ್ದರು.
BJP will be largest party. But, JDS- Congress coalition government will form in Karnataka after 2018 assembly elections. HD Kumaraswamy will be chief minister, Dinesh Gundurao deputy chief minister, prediction by astrologer Prakash Ammannaya, Kapu, Udupi.

Recommended