ಬೆಂಕಿ ಹಚ್ಚೋದು ಕಾಂಗ್ರೆಸ್ ಕೆಲಸ | Oneindia Kannada

  • 6 years ago
ಪರಿವರ್ತನಾ ಯಾತ್ರೆಯ ಅಂಗವಾಗಿ ಇಂದು ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ಬಿಜೆಪಿ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು. ಆದರೆ ಸಮಾವೇಶದಲ್ಲಿ ಖಾಲಿ ಕುರ್ಚಿಗಳೇ ರಾರಾಜಿಸುತ್ತಿದ್ದವು. ಇದರಿಂದ ದೆಹಲಿಯಿಂದ ಬಂದಿದ್ದ ರಾಜನಾಥ್ ಸಿಂಗ್ ಮುಜುಗರ ಅನುಭವಿಸಂತಾಯ್ತು.ರಾಜನಾಥ್ ಸಿಂಗ್ ಭಾಷಣ ಮಾಡುವಾಗ ಕಲಶ ಹಿಡಿದು ಬಂದಿದ್ದ ಹೆಂಗಳೆಯರು ಮತ್ತು ಒಂದಷ್ಟು ಜನ ಮಾತ್ರ ಪೆಂಡಾಲ್ ಒಳಗಿದ್ದರು. ಇವರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಿದ್ದರಾಮಯ್ಯ ಸರಕಾರದ ವಿರುದ್ಧ ಹರಿಹಾಯ್ದರು.ಇತ್ತೀಚೆಗೆ ಪರೇಶ್ ಮೇಸ್ತ ಕೊಲೆಯಾಗಿದ್ದಾರೆ. ಈ ಹತ್ಯೆ ಪ್ರಕರಣಗಳಲ್ಲಿ ಸರಕಾರ ಏನು ಮಾಡುತ್ತಿದೆ? ಗೌರಿ ಲಂಕೇಶ್ ರನ್ನೂ ಕೊಲ್ಲಲಾಯಿತು. ಕರ್ನಾಟಕದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗೌರಿ ಲಂಕೇಶ್ ಹತ್ಯೆಯನ್ನು ಎಲ್ಲಾ ಕೋನಗಳಿಂದ ತನಿಖೆಗೊಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ನಾನು ನೀಡುತ್ತೇನೆ. ನಾವು ಯಾರನ್ನೂ ರಕ್ಷಿಸುವುದಿಲ್ಲ," ಎಂದು ವಾಗ್ದಾನ ನೀಡಿದರು.ಇದೇ ವೇಳೆ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಎದುರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

"Paresh Mesta was recently killed,Gauri Lankesh was also killed. What this govt is doing in these murder cases? I want to assure Karnataka public that when our govt is formed, we will probe her death from all angles, culprits will be punished. We won't save anyone," said union Home Minister Rajnath Singh in a Parivarthana Yatra rally organised at Murugesh Palya, Bengaluru.

Recommended