ಇಂದಿರಾ ಗಾಂಧಿಯವರನ್ನ ನೆನಪಿಸಿಕೊಂಡ ಸೋನಿಯಾ ಗಾಂಧಿ | Oneindia Kannada

  • 6 years ago
In 1984, Indira ji was assassinated and I felt I had lost my mother and that incident changed my life forever, Sonia Gandhi emotionally told in New Delhi. She speaks after Rahul Gandhi takes charge as congress president from her.



1984ರಲ್ಲಿ ನಡೆದ ಇಂದಿರಾ ಗಾಂಧಿಯವರ ಹತ್ಯೆ ನನ್ನ ಬದುಕನ್ನು ಸಂಪೂರ್ಣ ಬದಲಿಸಿಬಿಟ್ಟಿತು. ಆಗ ನಾನು ನನ್ನ ತಾಯಿಯನ್ನು ಕಳೆದುಕೊಂಡಷ್ಟೇ ಅನಾಥಭಾವದಿಂದ ಕೊರಗಿದ್ದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾವುಕರಾಗಿ ನುಡಿದರು. ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಅಧಿಕೃತವಾಗಿ ಹಸ್ತಾಂತರಿಸಿದ ನಂತರ ಅವರು ಮಾತನಾಡಿದರು. ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸೋನಿಯಾ ಗಾಂಧಿ ತಮ್ಮ 19 ವರ್ಷಗಳ ಸುದೀರ್ಘ ರಾಜಕೀಯ ಏಳುಬೀಳುಗಳನ್ನು ಹಂಚಿಕೊಂಡರು.ರಾಹುಲ್ ಪಟ್ಟಾಭಿಷೇಕದ ನಂತರ ಪುತ್ರನನ್ನು ಅಭಿನಂದಿಸಿದ ಸೋನಿಯಾ ಗಾಂಧಿ, ಅತ್ತೆ ಇಂದಿರಾ ಗಾಂಧಿ ಮತ್ತು ಪತಿ ರಾಜೀವ್ ಗಾಂಧಿಯವರನ್ನು ಕಳೆದುಕೊಂಡು ತಾವು ಪರಿತಪಿಸಿದ ದಿನಗಳನ್ನು ನೆನೆದು ಮರುಗಿದರು.ಅತ್ತೆ ಇಂದಿರಾ ಗಾಂಧಿ, ಪತಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ಒಂಟಿಯಾದ ಸೋನಿಯಾ ಗಾಂಧಿ, 19 ವರ್ಷಗಳ ಕಾಲ ಕಾಂಗ್ರೆಸ್ ಅನ್ನು ಮುನ್ನಡೆಸಿದ್ದು ತಮಾಷೆಯ ಸಂಗತಿಯಲ್ಲ. ಪ್ರಧಾನಿಯಾಗುವ ಅವಕಾಶವಿದ್ದರೂ ಪಕ್ಕಕ್ಕೆ ತಳ್ಳಿ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿ, ಆದರ್ಶ ಮೆರೆದರು.

Recommended