ಸಿಗರೇಟ್ ಪ್ಯಾಕ್‌ನ ಮೇಲೆ 85%ರಷ್ಟು ಎಚ್ಚರಿಕೆ ಸಂದೇಶ ಮುದ್ರಿಸುವ ಅಗತ್ಯವಿಲ್ಲ - ಹೈ ಕೋರ್ಟ್

  • 6 years ago
ಸಿಗರೇಟ್ ಪ್ಯಾಕ್‌ಗಳ ಎರಡೂ ಕಡೆ ಚಿತ್ರ ಸಹಿತ ಎಚ್ಚರಿಕೆ ಸಂದೇಶ ಮುದ್ರಿಸುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. 2014ರಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ಕರ್ನಾಟಕ ಸರ್ಕಾರ ಸಿಗರೇಟ್ ಪ್ಯಾಕ್‌ಗಳ ಎರಡೂ ಕಡೆ ಶೇ 85 ಎಷ್ಟು ಚಿತ್ರ ಸಹಿತ ಎಚ್ಚರಿಕೆ ಸಂದೇಶ ಮುದ್ರಿಸಬೇಕು ಎಂಬ ನಿಯಮ ಜಾರಿಗೆ ತಂದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಮಯದಲ್ಲಿ ಗುರುವಾರ ಹೈಕೋರ್ಟ್ ಈ ನಿಯಮವನ್ನು ರದ್ದುಗೊಳಿಸಿದೆ. ಚಿತ್ರ ಸಹಿತ ಎಚ್ಚರಿಕೆ ಸಂದೇಶ ಮುದ್ರಿಸುವ ಬಗ್ಗೆ ಪರ-ವಿರೋಧ ಚರ್ಚೆಗಳು ದೇಶದಲ್ಲಿ ನಡೆಯುತ್ತಿವೆ. ಸಿಗರೇಟ್ ಪ್ಯಾಕ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆ ಶೇ 85ರಷ್ಟು ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆ ಸಂದೇಶ ಮುದ್ರಿಸುವಂತೆ 2014ರ ಅಕ್ಟೋಬರ್ 15ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಕೇಂದ್ರದ ಸಂಸದೀಯ ಸಮಿತಿ ಸಿಗರೇಟ್ ಪ್ಯಾಕ್‌ ಎರಡೂ ಬದಿಯಲ್ಲಿ ಶೇ 50ರಷ್ಟು ಎಚ್ಚರಿಕೆ ಸಂದೇಶ, ಬೀಡಿ ಮತ್ತು ಇತರ ವಸ್ತುಗಳ ಮೇಲೇ ಒಂದು ಕಡೆ ಎಚ್ಚರಿಕೆ ಸಂದೇಶ ಮುದ್ರಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರೋಗ್ಯ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು.

The Karnataka High Court took down the 2014 amendment rules that mandated pictorial health warnings to cover 85% of tobacco product packaging space.

Recommended