ಸ್ವಿಟ್ಜರ್ ಲ್ಯಾಂಡ್ ನ ಈ ಪಟ್ಟಣದಲ್ಲಿ ನೀವು ವಾಸವಿದ್ರೆ ನಿಮಗೆ ಸಿಗುತ್ತೆ 40 ಲಕ್ಷ | Oneindia Kannada

  • 6 years ago
Switzerland, this is the destination where people wish to spend
their honeymoon period in with their partner. But going there is not a
cup of tea for all! Well, there is a solution for this, as now the
Government in Switzerland is offering people $60,000 to live in a town!
Sounds fishy? Well, the reason why the offer is being made to the public
is because of the human population becoming extinct in the village!
Check out more on this interesting town of Switzerland, Watch Video.

ಸ್ವಿಸ್ ಎಂದರೆ ಹಿಂಜಿ ಬಿಟ್ಟ ಹತ್ತಿಯಂತೆ ಕಣ್ಣು ಕಾಣುವಷ್ಟು ದೂರಕ್ಕೂ
ಹರಡಿರುವ ಹಿಮ ನಿಮ್ಮ ಮನಸ್ಸಿನಲ್ಲಿ ಮೂಡಿದರೆ ಅದು ಸಾಮಾನ್ಯ , ಜೊತೆ ಜೊತೆಗೆ ಸ್ವಿಸ್
ವಾಚುಗಳು , ಭಾರತೀಯರ ಹಣ ಸುರಕ್ಷಿತವಾಗಿ ಇಟ್ಟು ಕೂಂಡು ಅವರ ಹೆಸರು ಹೇಳದೆ ಗೌಪ್ಯತೆ
ಕಾಪಾಡುವ ಬ್ಯಾಂಕುಗಳು ಬಾಲಿವುಡ್ ಶೂಟಿಂಗ್ .. ಮಸ್ತಕದಲ್ಲಿ ಹಾದು ಹೋಗುತ್ತದೆ ಅಲ್ಲವೇ
? ನಿಜ ಇವು ಸ್ವಿಟ್ಜರ್ಲ್ಯಾಂಡ್ ದೇಶಕ್ಕೆ ವಿಶ್ವ ಮಾನ್ಯತೆ ತಂದು ಕೊಟ್ಟಿರುವ ಹೆಚ್ಚು
ಪ್ರಸಿದ್ಧ ವಿಷಯಗಳು . ಸ್ವಿಸ್ ದುಬಾರಿ ದೇಶ . ಒಬ್ಬ ವ್ಯಕ್ತಿ ಬೆಂಗಳೂರಿನಿಂದ ಹೊರಟು
ಒಂದು ವಾರ ಇದ್ದು ಮುಖ್ಯ ಪ್ರವಾಸಿ ತಾಣಗಳ ನೋಡಿ ಬರಲು ಎರಡೂವರೆ ಲಕ್ಷ ರೂಪಾಯಿ ಖಂಡಿತ
ಬೇಕಾಗುತ್ತೆ . ಭಾರತೀಯರಿಗೆ ವೀಸಾ ಅವಶ್ಯಕತೆ ಇದೆ . ಜುಲೈ , ಆಗಸ್ಟ್ ಮತ್ತು
ಸೆಪ್ಟೆಂಬರ್ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಉಳಿದಂತೆ ಇಲ್ಲಿ ಚಳಿ ಅತಿ ಹೆಚ್ಚು
.ಇಂಥಾ ಸ್ವಿಟ್ಜರ್ ಲ್ಯಾಂಡ್ ನ ಒಂದು ಪಟ್ಟಣದಲ್ಲಿ ನೀವು ವಾಸವಿರೋಕೆ ರೆಡಿ ಇದ್ರೆ
ನಿಮಗೆ ಸಿಗುತ್ತೆ 40 ಲಕ್ಷ ಹಣ ಹಾಗು ಮನೆ. ಈ ಕೊತೂಹಲಕಾರಿ ಮಾಹಿತಿ ತಿಳಿಬೇಕಾದ್ರೆ ಈ ವಿಡಿಯೋ ನೋಡಿ

Recommended