ಪ್ರಧಾನಿ ಮೋದಿಯವರೇ ಗುಜರಾತಿನಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದರೇ ?! | Oneindia Kannada

  • 6 years ago
ಪ್ರಧಾನಿ ನರೇಂದ್ರ ಮೋದಿಯವರೇ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದರಾ..? ಹಾಗೊಂದು ಕೂಗು ಎದ್ದಿದೆ. ಅಹ್ಮದಾಬಾದಿನ ರಾನಿಪ್ ನಲ್ಲಿ ಜನರೊಡನೆ ಸರದಿಯಲ್ಲಿ ನಿಂತು ಮೋದಿ ಮತಚಲಾಯಿಸಿದ್ದು ನಿಜಕ್ಕೂ ಆದರ್ಶವೇ. ಆದರೆ ಮತಚಲಾಯಿಸಿದ ನಂತರ ರೋಡ್ ಶೋ ನಡೆಸಿದ್ದು ಸರಿಯೇ? ಚುನಾವಣಾ ನೀತಿ ಸಂಹಿತೆ ಛಾಲ್ತಿಯಲ್ಲಿರುವಾಗ ಇಷ್ಟೇಲ್ಲ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿ ರೋಡ್ ಶೋ ನಡೆಸಿದ್ದು ಎಷ್ಟಮಟ್ಟಿಗೆ ಸರಿ ಎಂಬುದು ಈಗ ಎದ್ದಿರುವ ಪ್ರಶ್ನೆ! ಇಂದು(ಡಿ.14) ಬೆಳಿಗ್ಗೆ ಅಹ್ಮದಾಬಾದಿನಲ್ಲಿ ಮತದಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮತದಾನದ ನಂತರ ತಾವು ಕುಳಿತಿದ್ದ ವಾಹನದಿಂದ ಎದ್ದು ಜನರತ್ತ ಕೈಬೀಸುತ್ತ ಕೆಲಕಾಲ ರೋಡ್ ಶೋ ನಡೆಸಿದ್ದರು. ಈ ಕುರಿತು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಲ್ಲದೆ, ಚುನಾವಣಾ ಆಯೋಗವೂ ಮೋದಿಯವರ ಒತ್ತಡದಲ್ಲಿ ಕೆಲಸ ಮಾಡುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.ಮತದಾನದ ನಂತರ ಪ್ರಧಾನಿ ಮೋದಿಯವರ ರೋಡ್ ಶೋ, ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಬಹುಶಃ ಚುನಾವಣಾ ಆಯೋಗವೂ ಪ್ರಧಾನಿ ನರೇಂದ್ರ ಮೋದಿಯವರ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಖಾರವಾಗಿ ಪ್ರಶ್ನಿಸಿದ್ದಾರೆ. 3

Did Modi himself break the model code of conduct in Gujarat after casting his vote by standing in line with the people.

Recommended