ಬೆಳಗಾವಿಯ ಬಾರ್ ಒಂದರಲ್ಲಿ GST ಸಹಿತ ಬಿಲ್ ಕೇಳಿದಕ್ಕೆ ಬಿತ್ತು ಗೂಸಾ | Oneindia Kannada

  • 6 years ago
ಬೆಳಗಾವಿಯ ಬಾರ್ ಒಂದರಲ್ಲಿ ಬಾರಿ ಗಲಾಟೆ . ಕಾರಣ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತ . ಜಿಎಸ್‌ಟಿ ಬಿಲ್ ಕೇಳಿದ್ದಕ್ಕೆ ಬಾರ್ ಸಿಬ್ಬಂದಿ ಇಬ್ಬರು ಯುವಕರನ್ನು ಮನಸೋಇಚ್ಛೆ ಥಳಿಸಿರುವ ಘಟನೆ ಬೆಳಗಾವಿಯ ಮಹಾಂತೇಶ ನಗರದಲ್ಲಿ ನಡೆದಿದೆ. ಮಾಹಂತೇಶ ನಗರದ ಪೂರ್ಣಿಮಾ ಬಾರಿಗೆ ಸ್ನೇಹಿತರಿಬ್ಬರು ಮಧ್ಯಪಾನ ಮಾಡಿ ಬಿಲ್ ಕಟ್ಟುವ ಬಿಲ್ ಕೇಳಿದ್ದಾರೆ. ಆಗ ಬಾರ್‌ನವರು ಹಳದಿ ಹಾಳೆಯೊಂದರಲ್ಲಿ ಬಿಲ್ ಬರೆದು ನೀಡಿದ್ದಾರೆ. ಆದರೆ ಯುವಕರು ಜಿಎಸ್‌ಟಿ ಸೇರಿರುವ ಮುದ್ರಿತ ಬಿಲ್ ನೀಡಲು ಒತ್ತಾಯಿಸಿದ್ದಾರೆ. ಯುವಕರ ಆಗ್ರಹಕ್ಕೆ ಕೋಪಗೊಂಡ ಬಾರ್ ಸಿಬ್ಬಂದಿ ಮಾತಿಗೆ ಮಾತು ಬಳಸಿ ಇಬ್ಬರು ಯುವಕರನ್ನು ಮನಸೋಇಚ್ಛೆ ಥಳಿಸಿದ್ದಾರೆ. ಲಾಟಿ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿರುವ ಸಿಬ್ಬಂದಿ, ಯುವಕರು ಬಾರಿನಿಂದ ಹೊರಬಂದಮೇಲೂ ಅಟ್ಟಾಡಿಸಿಕೊಂಡು ಹೊಡೆದು ಅಟ್ಟಹಾಸ ಮೆರೆದಿದ್ದಾರೆ.

2 people were trashed very badly at a bar in Belagavi for asking a bill which included GST.

Recommended