ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿದೆ. ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು ಎಂಬುದು ಗೊತ್ತಿದ್ದರೂ, ಮತದಾರರ ಗುರುತಿನ ಚೀಟಿ(Voter Id)ಯೇ ಇಲ್ಲದೆ ಹಲವರು ಮತ ಚಲಾಯಿಸದ ಉದಾಹರಣೆಗಳಿವೆ. ಕೇವಲ ಮತ ಚಲಾವಣೆಗೆ ಮಾತ್ರವಲ್ಲದೆ ಹಲವು ಕೆಲಸಗಳಿಗೆ ವೋಟರ್ ಐಡಿಯನ್ನು ಗುರುತಿನ ಚೀಟಿಯಾಗಿ ಬಳಸಬಹುದು. 18 ವರ್ಷ ಮೀರಿದ ಪ್ರತಿಯೊಬ್ಬ ಭಾರತೀಯರೂ ಹೊಂದಿರಲೇಬೇಕಾದ ಈ ಚುನಾವಣಾ ಗುರುತಿನ ಚೀಟಿಯನ್ನು ಪಡೆಯುವುದು ಹೇಗೆ? ವೋಟರ್ ಐಡಿಯನ್ನು ಭಾರತೀಯ ಚುನಾವಣಾ ಆಯೋಗ ನೀಡುತ್ತದೆ. ಮೊದಲು ಕೇವಲ ಮತ ಚಲಾವಣೆಗಾಗಿ ಮಾತ್ರ ನೀಡಲಾಗುತ್ತಿದ್ದ ಈ ವೋಟರ್ ಐಡಿಯನ್ನು ಈಗ ಗುರುತಿನ ಚೀಟಿಯಾಗಿ, ವಿಳಾಸ, ವಯಸ್ಸಿನ ದೃಢೀಕರಣವಾಗಿ ಸಹ ಬಳಸಬಹುದು. ಅಷ್ಟೇ ಅಲ್ಲ, ಪಾಸ್ ಪೋರ್ಟ್ ಪಡೆಯುವುದಕ್ಕೆ, ಸಿಮ್ ಪಡೆಯುವುದಕ್ಕೆ, ವಿದ್ಯುತ್ ಸಂಪರ್ಕಕ್ಕೆ ಮುಂತಾಗಿ ಹಲವು ಕೆಲಸಗಳಿಗೂ ಇದನ್ನು ಬಳಸಬಹುದು. ವೆಬ್ ಸೈಟ್ ಗೆ ತೆರಳಿ. ವೆಬ್ ಸೈಟ್ ವಿಳಾಸ: www.ceokarnataka.kar.nic.in Enroll Online as a voter' ಆಯ್ಕೆಯನ್ನು ಕ್ಲಿಕ್ ಮಾಡಿದರೆ www.voterreg.kar.nic.in ಎಂಬ ವೆಬ್ ಸೈಟ್ ತೆರೆದುಕೊಳ್ಳುತ್ತದೆ.
The video helps you in getting a voter Id in karnataka . If you are above 18 and don't have a voter id yet. please follow the steps given in the video