ನರೇಂದ್ರ ಮೋದಿ ಗುಜರಾತ್ ನಲ್ಲಿ ಸಾಗರ ವಿಮಾನ ಪ್ರಯಾಣ | Oneindia Kannada

  • 7 years ago
ಪ್ರಧಾನಿ ನರೇಂದ್ರ ಮೋದಿ ಇಂದು 'ಸಾಗರ ವಿಮಾನ' (ಸೀ ಪ್ಲೇನ್) ದಲ್ಲಿ ಅಹಮದಾಬಾದ್ ನ ಸಾಬರಮತಿ ನದಿಯಿಂದ ದರೋಯ್ ಅಣೆಕಟ್ಟಿನವರೆ ಐತಿಹಾಸಿಕ ಪ್ರಯಾಣ ನಡೆಸಿದರು. ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಡಿಸೆಂಬರ್ 14ರಂದು ನಡೆಯಲಿದ್ದು, ಬಹಿರಂಗ ಪ್ರಚಾರ ಇಂದು ಕೊನೆಗೊಳ್ಳಲಿದೆ. ಹೀಗಾಗಿ ಇಂದು ರೋಡ್ ಶೋ, ಸಾಗರ ವಿಮಾನ ಪ್ರಯಾಣದ ಮೂಲಕ ಮೋದಿ ಅಂತಿಮ ದಿನದ ಪ್ರಚಾರ ನಡೆಸಿದರು.11 ಗಂಟೆಗೆ ಸಾಬರಮತಿ ನದಿಯಿಂದ 'ಸಾಗರ ವಿಮಾನ' ಹತ್ತಿದ ನರೇಂದ್ರ ಮೋದಿ 12 ಗಂಟೆಗೆ ದರೋಯ್ ಅಣೆಕಟ್ಟಿನಲ್ಲಿ ಬಂದು ಇಳಿದರು.ದರೋಯ್ ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ಬನಸ್ಕಾಂತದ ಅಂಬಾಜಿ ದೇವಸ್ಥಾನದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆಯ ಇಕ್ಕೆಲದಲ್ಲೂ ನೆರೆದಿದ್ದ ಅಸಂಖ್ಯಾತ ಜನರತ್ತ ಪ್ರಧಾನಿ ಕೈ ಬೀಸುತ್ತಾ ಸಾಗಿದರು.
Prime Minister Narendra Modi on Tuesday traveled in a Sea Plane from Sabarmati river in the city to Dharoi dam in Mehsana district.

Recommended