ಮಗನಿಗೆ ಶಾಲೆ ಬೇಡ , ಟೆನಿಸ್ ಸಾಕು ಎಂದ ಟೀಚರ್ ತಂದೆ | Oneindia Kannada

  • 6 years ago
"ಎಂಜಿನಿಯರಿಂಗ್- ಮೆಡಿಕಲ್ ಸಹ ಮಾಡಬೇಕು. ಜತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಬೇಕು ಅಂದುಕೊಳ್ಳೋದು ತಪ್ಪು. ನನಗೆ ಮಗನಿಗೆ ಎಷ್ಟು ಮಾರ್ಕ್ಸ್- ಗ್ರೇಡ್ ಬಂತು ಅನ್ನೋದು ಖಂಡಿತಾ ಮುಖ್ಯವಲ್ಲ. ಆದ್ದರಿಂದಲೇ ಅವನನ್ನು ಶಾಲೆ ಬಿಡಿಸಿ, ಟೆನಿಸ್ ಆಟದಲ್ಲೇ ಪೂರ್ತಿಯಾಗಿ ತೊಡುಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದೀವಿ"-ಹೀಗೆಂದವರು ಮಲ್ನಾಡ್ ಕೋಚಿಂಗ್ ಸೆಂಟರ್ ನ ತೀರ್ಥಹಳ್ಳಿ ಕೇಶವಮೂರ್ತಿ. ತಂದೆ-ತಾಯಿ ತಮ್ಮ ಮಗನನ್ನು ಯಾವ ಶಾಲೆಗೆ ಸೇರಿಸುವುದು, ಯಾವುದು ಒಳ್ಳೆ ಟ್ಯೂಷನ್ ಅಂತ ಹುಡುಕಾಡಿ, ಅತ್ಯುತ್ತಮ ಅನ್ನೋದಿಕ್ಕೆ ಸೇರಿಸಬೇಕು ಎಂದು ಧಾವಂತ ಪಡುತ್ತಾರೆ. ಆದರೆ ಕೇಶವಮೂರ್ತಿ ಹಾಗೂ ಪದ್ಮಾವತಿ ದಂಪತಿ ಮಗನ ಟೆನಿಸ್ ರಾಕೆಟ್, ಷೂ, ಬಟ್ಟೆ, ಪೋಷಕಾಂಶ ಇರುವ ಆಹಾರ ಈ ಬಗ್ಗೆಯೇ ಯೋಚಿಸುತ್ತಾರೆ.ತಮ್ಮ ಮಗ ಅನೂಪ್ ನನ್ನು ಎರಡು ವರ್ಷದ ಹಿಂದೆ ಶಾಲೆ ಬಿಡಿಸಿದ್ದಾರೆ. ಅಂದರೆ ಶಾಲೆಗೆ ಹೋಗಲ್ಲ. ಆದರೆ ಫೀ ಕಟ್ಟಿದ್ದಾರೆ. ಪಾಠವನ್ನು ಕೇಶವಮೂರ್ತಿ ಮತ್ತು ಪದ್ಮಾವತಿ ಅವರೇ ಮಾಡ್ತಾರೆ. ಹುಡುಗ ವಾರ್ಷಿಕ ಪರೀಕ್ಷೆಯನ್ನು ಬರೆಯುತ್ತಾನೆ.
This father has set an example to other parents who say sports can't feed anyone. These parents have made his son discontinue his education and let him play just tennis

Recommended