ಅಂಬರೀಶ್-ಸುದೀಪ್ ಸಿನಿಮಾ ಹಿಂದಿದ್ದಾರೆ ಸ್ಟೈಲ್ ಕಿಂಗ್ ರಜನಿಕಾಂತ್ | Filmibeat Kannada

  • 6 years ago
ನಟ ಅಂಬರೀಶ್ ಮತ್ತು ಸುದೀಪ್ ಈಗ ಒಟ್ಟಿಗೆ ಸಿನಿಮಾ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇತ್ತೀಚಿಗಷ್ಟೆ ಈ ಚಿತ್ರದ ನಿರ್ದೇಶಕರ ಬಗ್ಗೆ ಕೂಡ ಬ್ರೇಕಿಂಗ್ ನ್ಯೂಸ್ ಬಂದಿತ್ತು. ಇದೀಗ ಈ ಚಿತ್ರದ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಷಯ ಹೊರಬಂದಿದೆ. ಅಂಬರೀಶ್ ಮತ್ತು ಸುದೀಪ್ ಜೋಡಿಯ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಹಿಂದೆ ನಟ ರಜನಿಕಾಂತ್ ಇದ್ದಾರಂತೆ. ಈ ಚಿತ್ರ ಶುರುವಾಗುವುದಕ್ಕೆ ರಜನಿ ಪ್ರಮುಖ ಕಾರಣವಂತೆ. ಹೌದು... ಇತ್ತೀಚಿಗಷ್ಟೆ ಸಂದರ್ಶನವೊಂದಲ್ಲಿ ಮಾತನಾಡಿರುವ ಅಂಬರೀಶ್ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಕೆಲ ವಿಚಾರದ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ತಮಿಳಿನ 'ಪವರ್ ಪಾಂಡಿ' ಸಿನಿಮಾ ನೋಡಿದ ರಜನಿಕಾಂತ್ ಇತ್ತೀಚಿಗೆ ಒಮ್ಮೆ ಅಂಬರೀಶ್ ಅವರಿಗೆ ಕರೆ ಮಾಡಿ ''ನೀವು ಒಂದು ಸಾರಿ 'ಪವರ್ ಪಾಂಡಿ' ಸಿನಿಮಾ ನೋಡಿ, ಈ ಚಿತ್ರ ನಿಮಗೆ ಸೂಟ್ ಆಗುತ್ತದೆ... ನೀವು ಈ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ'' ಎಂದು ಹೇಳಿದರಂತೆ.ರಜನಿ ಮಾತಿನಂತೆ 'ಪವರ್ ಪಾಂಡಿ' ಸಿನಿಮಾವನ್ನು ಅಂಬರೀಶ್ ನೋಡಿದ್ದಾರೆ. ಅಂಬಿಗೆ ಕೂಡ ಚಿತ್ರ ಬಹಳ ಇಷ್ಟ ಆಗಿದೆ. ಆ ಬಳಿಕ ಈ ಚಿತ್ರವನ್ನು ಮಾಡುವ ಬಯಕೆ ಅಂಬಿಯಲ್ಲಿ ಹುಟ್ಟಿಕೊಂಡಿದೆ.
Matinee idol Kollywood Super Star Rajinikanth is one of the most popular actor in south indian , Another name Rajani is that simplicity.Rajinikanth referred Ambareesh to do 'Power Pandi' movie remake.

Recommended