ರಾಜ್ ಮತ್ತು ರಜನಿ ಗೆ ಇರುವ ಮತ್ತೊಂದು ಹೆಸರೇ ಸರಳತೆ | Filmibeat Kannada

  • 7 years ago
ವರನಟ ಡಾ. ರಾಜಕುಮಾರ್ ಮತ್ತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಚಿತ್ರೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದವರು. 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ರಾಜಣ್ಣ ಒಟ್ಟು 208 ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ಜೀವಿತಾವಧಿಯಲ್ಲಿ ಬಹಳಷ್ಟು ಆಫರ್ ಗಳು ಇದ್ದರೂ ರಾಜ್, ಕನ್ನಡ ಹೊರತಾಗಿ ಬೇರೆ ಭಾಷೆಯಲ್ಲಿ ನಟಿಸಿರಲಿಲ್ಲ. ಇತ್ತ 1975ರಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸ್ಟೈಲ್ ಕಿಂಗ್ ರಜನೀಕಾಂತ್, ತಮಿಳು, ತೆಲುಗು, ಕನ್ನಡ, ಮಲಯಾಳಂ, ಇಂಗ್ಲಿಷ್, ಬೆಂಗಾಳಿ, ಹಿಂದಿ ಸೇರಿದಂತೆ ಸುಮಾರು 155ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜಕುಮಾರ್ ಮತ್ತು ರಜನೀಕಾಂತ್ ಅವರ ನಡುವೆ ಕೆಲವು ಸಾಮ್ಯತೆಗಳನ್ನು ಕಾಣಬಹುದಾಗಿದೆ.ಡಾ. ರಾಜಕುಮಾರ್ ಮತ್ತು ರಜನೀಕಾಂತ್ ಸರಳತೆಗೆ ಇರುವ ಇನ್ನೊಂದು ಹೆಸರು. ಇಬ್ಬರೂ ಮೇರು ಕಲಾವಿದರು ಅಭಿಮಾನಿಗಳನ್ನು ದೇವರು ಎಂದು ಗೌರವ ನೀಡುವವರು. ತಮ್ಮ ತಮ್ಮ ಭಾಷೆಯ ವಿಚಾರಕ್ಕೆ ಬಂದಾಗ ಹಲವು ಬಾರಿ ಹೋರಾಟಕ್ಕೆ ಇಳಿದವರು.ರಾಜ್ ಮತ್ತು ರಜನೀಕಾಂತ್ ಅರವತ್ತರ ವಯಸ್ಸಿನಲ್ಲೂ ನಾಯಕನಟನಾಗಿ ನಟಿಸಿದವರು. ಪದ್ಮಭೂಷಣ ರಾಜಕುಮಾರ್ ಅರವತ್ತರ ವಯಸ್ಸಿನ ನಂತರವೂ ನಾಲ್ಕು ಚಿತ್ರದಲ್ಲಿ ನಟಿಸಿದ್ದರು (ಜೀವನಚೈತ್ರ, ಆಕಸ್ಮಿಕ, ಒಡಹುಟ್ಟಿದವರು, ಶಬ್ದವೇಧಿ). ಶಬ್ದವೇಧಿ ಚಿತ್ರದಲ್ಲಿ ನಟಿಸಬೇಕಾದರೆ ರಾಜ್ ಅವರಿಗೆ ಎಪ್ಪತ್ತು ವರ್ಷ. ಇತ್ತ ರಜನೀಕಾಂತ್ ಅರವತ್ತರ ನಂತರ ಎಂಥಿರನ್, ಕೊಚಾಡಿಯನ್ ಮತ್ತು ಲಿಂಗಾ ಹೀಗೆ ಮೂರು ಚಿತ್ರದಲ್ಲಿ ನಟಿಸಿದ್ದಾರೆ.
Similarities between Kannada Matinee idol Dr. Rajkumar and Kollywood Super Star Rajinikanth. one of the most popular actors in south indian , Another name for Raj and Rajani is simplicity