'ಮೋದಿ ಯಾರ ಮಗ' ಎಂದಿದ್ದ ಸಲ್ಮಾನ್, ಮೋದಿ ಹೇಳಿದ್ದೇನು ಗೊತ್ತಾ | Oneindia Kannada

  • 6 years ago
ಪ್ರತಿ ಮನೆಯಲ್ಲಿ ಅಫ್ಜಲ್ ಹುಟ್ಟುತ್ತಾನೆ ಎಂಬ ದುರಹಂಕಾರದ ಹೇಳಿಕೆ ನೀಡಿದ್ದ ಸಲ್ಮಾನ್ ನಿಜಾಮಿ,ರಾಹುಲ್ ಗಾಂಧಿಯವರಿಗೆ ಆಪ್ತ ಸ್ನೇಹಿತನೇ..?! ಅಂಥ ಅನುಮಾನಗಳಿಗೆ ಪುರಾವೆ ನೀಡುವಂಥ ಪೋಸ್ಟರ್ ಗಳೀಗ ಗುಜರಾತಿನ ಬೀದಿ ಬೀದಿಯಲ್ಲಿ ರಾರಾಜಿಸುತ್ತಿವೆ. 'ಪ್ರಧಾನಿ ನರೇಂದ್ರ ಮೋದಿ ಯಾರ ಮಗ?' ಎಂದು ಪ್ರಶ್ನಿಸಿ, ಮೋದಿ ಅಭಿಮಾನಿಗಳ ಮಾತ್ರವಲ್ಲ, ಸ್ವತಃ ಮೋದಿಯವರ ಕೆಂಗಣ್ಣಿಗೂ ಪಾತ್ರರಾದ ಯುವ ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜಾಮಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.ಸಲ್ಮಾನ್ ನಿಜಾಮಿಗೂ ನಮಗೂ ಸಂಬಂಧವೇ ಇಲ್ಲ, ಆತನ ಯಾರೆಂಬುದೇ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದೇನೋ ಸರಿ. ಆದರೆ ರಾಹುಲ್ ಗಾಂಧಿಯವರ ಜತೆ ಆಪ್ತ ನಗೆ ಚೆಲ್ಲುತ್ತ ನಿಂತಿರುವ ನಿಜಾಮಿ ಚಿತ್ರಗಳು ಸುಳ್ಳು ಹೇಳುತ್ತವೆಯೇ ಅನ್ನೋದು ಜನರ ಪ್ರಶ್ನೆ!ಹೌದು, ಸಲ್ಮಾನ್ ಜೊತೆ ರಾಹುಲ್ ಗಾಂಧಿ ಆಪ್ತವಾಗಿ ನಿಂತಿರುವ ಹಲವು ಚಿತ್ರಗಳನ್ನು ಗುಜರಾತಿನ ಬೀದಿಗಳಲ್ಲಿ ಅಂಟಿಸಿ, ಕಾಂಗ್ರೆಸ್ಸಿನ ಮಾನ ಹರಾಜು ಹಾಕುವ ಕಾರ್ಯ ನಡೆಯುತ್ತಿದೆ! ಈ ಕೆಲಸ ಮಾಡುತ್ತಿರುವುದು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ.


the Posters of Rahul Gandhi with Salman Nizami, who has given a controversial statement against Narendra Modi, have been put up in Ahmedabad on Gujarat assembly elections eve. The posters also have cuttings of Salman's twitters in which he had supported terrorist Afzal Guru, who attacked Parliament. The controversy creates a blame game between BJP and Congress in Gujarat now.

Recommended