ಬಿಗ್ ಬಾಸ್ ಕನ್ನಡ ಸೀಸನ್ 5 : ರಿಯಾಜ್ ಗೆ ಬಾಯಿಗೆ ಬಂದಹಾಗೆ ಬೈದ ದಿವಾಕರ್ | Filmibeat Kannada

  • 7 years ago
'ಬಿಗ್ ಬಾಸ್' ಮನೆಯಲ್ಲಿ ಮೊದಲೆರಡು ವಾರ ಇಡೀ ಮನೆ ದಿವಾಕರ್ ವಿರುದ್ಧ ತಿರುಗಿ ಬಿದ್ದಿದ್ದಾಗ, ದಿವಾಕರ್ ಪರ ದನಿ ಎತ್ತಿದ್ದು ರಿಯಾಝ್. ಆದ್ರೀಗ ಅದೇ ರಿಯಾಝ್ ಮತ್ತು ದಿವಾಕರ್ ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. 'ಗಂಧದ ಗುಡಿ' ಟಾಸ್ಕ್ ನಲ್ಲಿ ರಿಯಾಝ್ ಗೆ ದಿವಾಕರ್ 'ಥೂ' ಎಂದು ಉಗಿದಿದ್ದಾರೆ. ರಿಯಾಝ್ ಕೂಡ ದಿವಾಕರ್ ಮೇಲೆ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ. ಸಾಲದಕ್ಕೆ, ಕರ್ನಾಟಕದ ಜನತೆ ಮುಂದೆ, ಕ್ಯಾಮರಾ ಮುಂದೆ ರಿಯಾಝ್ ನಾಟಕ ಮಾಡುತ್ತಿದ್ದಾರೆ ಎಂದಿದ್ದಾರೆ ದಿವಾಕರ್. ಅಷ್ಟಕ್ಕೂ, ಆಗಿದ್ದೇನು.?'ಬಿಗ್ ಬಾಸ್' ನೀಡಿದ್ದ 'ಗಂಧದ ಗುಡಿ' ಟಾಸ್ಕ್ ನಲ್ಲಿ ಸಮೀರಾಚಾರ್ಯ (ಕರಡಿ), ಜಗನ್ (ಹುಲಿ), ದಿವಾಕರ್ (ಕೋತಿ), ನಿವೇದಿತಾ (ಮರಿ ಆನೆ), ಆಶಿತಾ (ಗಿಳಿ) ಹಾಗೂ ಅನುಪಮಾ (ಕೋತಿ) ಕಾಡು ಪ್ರಾಣಿಗಳಾದರೆ... ಕಾರ್ತಿಕ್, ಚಂದನ್ ಶೆಟ್ಟಿ, ರಿಯಾಝ್, ವೈಷ್ಣವಿ, ಶ್ರುತಿ, ಕೃಷಿ ಹಾಗೂ ಜಯಶ್ರೀನಿವಾಸನ್ ಕಾಡು ಜನರಾದರು. ಇನ್ನೂ 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಬಂದ ಅಕುಲ್ ಬಾಲಾಜಿ ''ನಾಡಿನಿಂದ ಕಾಡಿಗೆ ಬಂದ'' ಮಾಸ್ಟರ್ ಪಾತ್ರವನ್ನ ವಹಿಸಿಕೊಂಡರು.

Bigg Boss Kannada 5: Week 8: Verbal fight between Diwakar and Riaz Basha. Diwakar slams Riaz Bhasha & Riaz also hits back Diwakar

Recommended