ನ್ಯೂಸ್ ನೇಷನ್ ಸಮೀಕ್ಷೆ: ಗುಜರಾತಿನಲ್ಲಿ ಬಿಜೆಪಿಗೆ ಭಾರೀ ಜಯ | Oneindia Kannada

  • 7 years ago
ಅಹಮದಾಬಾದ್, ಡಿಸೆಂಬರ್ 06: 'ನ್ಯೂಸ್ ನೇಷನ್' ಸಮೀಕ್ಷೆಯಂತೆ ಗುಜರಾತಿನಲ್ಲಿ ಈ ಬಾರಿ ಬಿಜೆಪಿ ಹಿಂದೆಂದೂ ಕಂಡರಿಯದ ಭರ್ಜರಿ ಜಯ ದಾಖಲಿಸಲಿದೆ.ಬಿಜೆಪಿ 131 - 141 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದರೆ, ಕಾಂಗ್ರೆಸ್ 37-47 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇತರರು 2-6 ಸ್ಥಾನಗಳಲ್ಲಿ ವಿಜಯದ ನಗೆ ಬೀರಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.ಬಿಜೆಪಿ ಒಟ್ಟು ಶೇಕಡಾ 49ರಷ್ಟು ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ ಶೇಕಡಾ 37 ಮತಗಳನ್ನು ಪಡೆಯಲಿದ್ದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದ್ದರೆ, ಇತರರು ಶೇಕಡಾ 14 ಮತಗಳನ್ನು ಪಡೆಯಬಹುದು ಎಂದು ತಿಳಿದು ಬಂದಿದೆ.ಈ ಬಾರಿ ಗುಜರಾತ್ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಹಿಂದೆಂದೂ ಕಂಡರಿಯದಷ್ಟು ಪ್ರತಿಷ್ಠೆಯ ಪ್ರಶ್ನೆಯಾಗಿದೆ.ಡಿಸೆಂಬರ್ 9 ಮತ್ತು 14ರಂದು ಗುಜರಾತಿನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಫಲಿತಾಂಶ ಹೊರ ಬೀಳಲಿದೆ.

Gujrat Assembly Elections 2017: News Nation Opinion Poll predicts that BJP will came to power once again in Gujarat.

Recommended