ಪಾರ್ವತಮ್ಮ ರಾಜ್ ಕುಮಾರ್ ರವರ 78ನೇ ಜನ್ಮದಿನ ಇಂದು | ಕೆಲವು ವಿಷಯಗಳು ನಿಮಗಾಗಿ

  • 6 years ago
ಕನ್ನಡ ಚಿತ್ರರಂಗ ಕಂಡ ಮಹಾನ್‌ ನಿರ್ಮಾಪಕಿ, ಧೀರ ಮಹಿಳಾಮಣಿ, ಹೆಮ್ಮೆಯ ಕನ್ನಡತಿ ಡಾ.ರಾಜ್‌ಕುಮಾರ್‌ ಅಂತಹ ಧ್ರುವತಾರೆಯ ಹಿಂದೆ ನಿಂತು ಪ್ರಜ್ವಲಿಸಿದ ಜ್ಯೋತಿ, ಮಕ್ಕಳ ಬದುಕಿಗೆ ರಾಜಮಾರ್ಗವಾಗಿ ನಿಂತ ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ರವರ 78 ವರ್ಷದ ಜನ್ಮದಿನೋತ್ಸವ ಇಂದು. ಏಳು ತಿಂಗಳ ಹಿಂದೆಯಷ್ಟೇ ಕನ್ನಡ ಚಿತ್ರೋದ್ಯಮ ಹಾಗೂ ಅಪಾರ ಅಭಿಮಾನಿ ಬಳಗವನ್ನ ಬಿಟ್ಟು ಹೋದ ಪಾರ್ವತಮ್ಮ ಈಗ ನೆನಪು ಮಾತ್ರ. ಕನ್ನಡ ಸಿನಿಮಾರಂಗದ ನಿರ್ಮಾಪಕಿ ಹಾಗೂ ವಿತರಕಿ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ತಿಳಿದುಕೊಳ್ಳುವಂತಹ ಅನೇಕ ವಿಚಾರಗಳಿವೆ. ಹುಟ್ಟುಹಬ್ಬದ ವಿಶೇಷವಾಗಿ ಸಾಮಾನ್ಯ ಜನರಿಗೆ ಪಾರ್ವತಮ್ಮ ನವರ ಬಗ್ಗೆ ಗೊತ್ತಿಲ್ಲದಂತಹ ವಿಚಾರಗಳನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ,ಪಾರ್ವತಮ್ಮ ಅವರನ್ನ ಚಿತ್ರ ನಿರ್ಮಾಪಕಿ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೆ ಗೃಹಿಣಿ ಅಂದರೆ ತಪ್ಪಾಗಲ್ಲ.. ಸುಮಾರು 24 ಮಕ್ಕಳಿಗೆ ಒಂದೇ ರೀತಿ ಶಿಕ್ಷಣ, ಊಟ, ವಸತಿ ಕೊಟ್ಟು ಸಾಕಿದ ಕೀರ್ತಿ ಪಾರ್ವತಮ್ಮನವರಿಗೆ ಸಲ್ಲುತ್ತೆ. ಮಕ್ಕಳನ್ನಾಗಲಿ, ದೊಡ್ಡವರನ್ನಾಗಲಿ, ಬೇದಭಾವವಿಲ್ಲದೆ ನೋಡಿಕೊಂಡವರು ಅವರು.
Today, on 06/12/2017 Pravathamma Rajkumar Birth Anniversary. On this occasion, we are going to tell you few lesser Known facts about Kannada Producer Late Parvathamma Rajkumar.

Recommended