ಗುಜರಾತ್ ಚುನಾವಣೆ 2017 : ಮತಗಟ್ಟೆ ಸಮೀಕ್ಷೆ ಚುನಾವಣಾಪೂರ್ವ ಸಮೀಕ್ಷೆ ಸುಳ್ಳಾಗುತ್ತಾ | Oneindia Kannada

  • 7 years ago
ಇಡೀ ದೇಶ ಕುತೂಹಲದಿಂದ ಕಾಯುತ್ತಿರುವ ಗುಜರಾತ್ ಅಸೆಂಬ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಶನಿವಾರ (ಡಿ 9) ಮೊದಲ ಹಂತ ಮತ್ತು ಎರಡನೇ ಹಂತದ ಮತದಾನ ಡಿ.14ರಂದು ನಡೆಯಲಿದೆ. ಡಿ. 18ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಗುಜರಾತ್ ಚುನಾವಣೆಗೆ ಮುನ್ನ ಕೊನೆಯ ಚುನಾವಣಾಪೂರ್ವ ಸಮೀಕ್ಷೆ ಎನ್ನಲಾಗುತ್ತಿರುವ ಎಬಿಪಿ ನ್ಯೂಸ್- ಸಿಎಸ್‌ಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಹೊರಬಿದ್ದಿದೆ. ಇನ್ನೇನಿದ್ದರೂ ಡಿಸೆಂಬರ್ 14-15ರಂದು ಪ್ರಕಟವಾಗಲಿರುವ ಮತಗಟ್ಟೆ ಸಮೀಕ್ಷೆ.ಮಾಧ್ಯಮಗಳ ಸಹಯೋಗದೊಂದಿಗೆ ಇತರ ಸಂಸ್ಥೆಗಳು ನಡೆಸುವ ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಗಳು ಕರಾರುವಕ್ಕಾದ ವರದಿ ನೀಡುತ್ತಿವೆಯಾ ಎಂದು ಕೇಳಿದರೆ, ಕೆಲವೇ ಕೆಲವು ಸಂಸ್ಥೆಗಳ ಸಮೀಕ್ಷಾ ವರದಿಯನ್ನು ಹೊರತು ಪಡಿಸಿ, ಇತರ ಎಲ್ಲಾ ಸಮೀಕ್ಷಾ ವರದಿಗಳಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬರುತ್ತದೆ.ಇದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆಯೆಂದರೆ. ಫೆಬ್ರವರಿ ಹನ್ನೊಂದರಿಂದ ಮಾರ್ಚ್ ಎಂಟರವರೆಗೆ, ಏಳು ಹಂತದಲ್ಲಿ ನಡೆದ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣಾ ಫಲಿತಾಂಶ. ಪ್ರಮುಖವಾಗಿ ಐದು ವಿವಿಧ ಮಾಧ್ಯಮಗಳು ನಡೆಸಿದ್ದ ಚುನಾವಣಾಪೂರ್ವ ಫಲಿತಾಂಶವಾಗಲಿ, ಎಕ್ಸಿಟ್ ಪೋಲಾಗಲಿ, ಪ್ರಕಟಿತ ಫಲಿತಾಂಶದ ಹತ್ತಿರಕ್ಕೂ ಬರಲಿಲ್ಲ. ಇಲ್ಲಿ ಸಮೀಕ್ಷೆ ಹೇಳಿದ್ದೇ ಒಂದು ಆಗಿದ್ದು ಇನ್ನೊಂದು..
Pre-Poll survey and Exit Poll ever be fully accurate? Recent Uttar Pradesh assembly election result shows, these survey results are never come to close to the actual figure.

Recommended