ಜಲಮಂಡಳಿ ವಿರುದ್ಧ ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳ ಪ್ರತಿಭಟನೆ | Oneindia Kannada

  • 6 years ago
ಜಲಮಂಡಳಿ ತಾರತಮ್ಯ: ಅಪಾರ್ಟ್ ಮೆಂಟ್ ನಿವಾಸಿಗಳ ಪ್ರತಿಭಟನೆ. ನಗರದ ಅಪಾರ್ಟ್ ಮೆಂಟ್ ಗಳ ಮೇಲೆ ಜಲಮಂಡಳಿ ತೋರುತ್ತಿರುವ ತಾರತಮ್ಯವನ್ನು ಖಂಡಿಸಿ ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್ ಪ್ರತಿಭಟನೆಯನ್ನು ಶನಿವಾರ ಬೆಂಗಳೂರು ನಗರಾದ್ಯಂತ ಆರಂಭಿಸಿದೆ. ಕಸ ವಿಲೇವಾರಿ ಶುಲ್ಕ,ನೈರ್ಮಲ್ಯ ಶುಲ್ಕ ಸಂಗ್ರಹಿಸಲಾಗುತ್ತದೆ. ಆದರೆ ಯಾವುದೇ ಸೇವೆಗಳನ್ನು ಒದಗಿಸುವುದಿಲ್ಲ, ಸರಿಯಾದ ಎಸ್ಟಿಪಿ ಗಳನ್ನು ಹೊಂದಿದ್ದರೂ ಕೂಡ, ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತದಿಂದ ಅಪಾರ್ಟ್ ಮೆಂಟ್ ಗಳು ಬೆದರಿಕೆಗೆ ಒಳಗಾಗುತ್ತಿದೆ ಎನ್ನುವುದು ಅಪಾರ್ಟ್ ಮೆಂಟ್ ಗಳ ಕೂಗಾಗಿದೆ.ನಗರದ ಅಪಾರ್ಟ್ ಮೆಂಟ್ ನಿವಾಸಗಳಿಗೆ ಡಬ್ಬಲ್ ಪೈಪಿಂಗ್ ಸಿಸ್ಟಂ ಮತ್ತು ಎಸ್.ಟಿ.ಪಿ(ಕೊಳಚೆ ನೀರು ಸಂಸ್ಕರಣಾ ಘಟಕ) ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿರುವ ಜಲಮಂಡಳಿ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳ ಅಸೋಸಿಯೇಷನ್ ಆನ್‌ ಲೈನ್ ಮೂಲಕ ಸಹಿ ಸಂಗ್ರಹಣ ಚಳವಳಿ ಆರಂಭಿಸಿದ್ದರು. ದಿನನಿತ್ಯ ಬಿಬಿಎಂಪಿ ಜಲಮಂಡಳಿ ಹೇರುತ್ತಿರುವ ಹೊಸ ತೆರಿಗೆಯನ್ನು ಕಟ್ಟಲಾಗದೆ ಕಂಗಾಲಾಗಿದ್ದಾರೆ.

Recommended