ಅಮಿತ್ ಶಾಗೆ ಸಿದ್ದರಾಮಯ್ಯ ಟ್ವೀಟ್ : @AmitShah ರವರೆ? Won't you learn Kannada? | Oneindia Kannada

  • 6 years ago
Won't you learn Kannada Mr. Amit Shah? Karnataka Chief Minister Siddaramaiah tweet questions to BJP National President Amit Shah and reply for Siddaramaiah tweet.

ಕನ್ನಡ ಕಲಿಯೋದಿಲ್ವಾ ಮಿ. ಅಮಿತ್ ಶಾ ಅಂದ ಸಿಎಂಗೆ ಟ್ವಿಟ್ಟಿಗರ ಕಿವಿಮಾತು! ಚುನಾವಣಾ ಹೊಸ್ತಿಲಲ್ಲಿ @siddaramaiah ಅನ್ನುವ ಟ್ವಿಟ್ಟರ್ ಅಕೌಂಟ್ ಮೂಲಕ ಸಿಕ್ಕಾಪಟ್ಟೆ ಚುರುಕಾಗಿರುವ ಮುಖ್ಯಮಂತ್ರಿಗಳು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಾಲೆಳೆಯುವ ಟ್ವೀಟ್ ಮಾಡಿದ್ದಾರೆ. 23.3ಸಾವಿರ ಫಾಲೋವರ್ಸ್ ಹೊಂದಿರುವ ಸಿದ್ದರಾಮಯ್ಯ, ಪದ್ಮಾವತಿ ಚಿತ್ರ ಬಿಡುಗಡೆಯ ವಿಚಾರದಲ್ಲಿ ಬಿಜೆಪಿ ನಿಲುವನ್ನು ಟೀಕಿಸಿದ್ದರು. ಮಂಗಳವಾರ (ನ 21) ರಾತ್ರಿ, ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ' ಕನ್ನಡ ಕಲಿಯೋದಿಲ್ವಾ @AmitShah ರವರೆ? Won't you learn Kannada?" ಎಂದು ಟ್ವೀಟ್ ಮಾಡಿದ್ದರು.ಪಕ್ಷದ ಬೇರು ಅಷ್ಟೇನೂ ಗಟ್ಟಿಯಿಲ್ಲದ ಪಶ್ಚಿಮಬಂಗಾಳ ಮತ್ತು ತಮಿಳುನಾಡಿನಲ್ಲಿ ಪಕ್ಷಬಲವರ್ಧನೆಗಾಗಿ ಬಂಗಾಳಿ ಮತ್ತು ತಮಿಳು ಭಾಷೆಗಳನ್ನು ಅಮಿತ್ ಶಾ ಕಲಿಯಲಾರಂಭಿಸಿದ್ದಾರೆಂದು ವರದಿಯಾಗಿತ್ತು. ಕೇಂದ್ರ ಸರಕಾರದ ಕ್ರಮವನ್ನು ಜನರಿಗೆ ಮನದಟ್ಟು ಮಾಡಲು ಶಾ, ಈ ಎರಡು ಪ್ರಾದೇಶಿಕ ಭಾಷೆಗಳನ್ನು ಕಲಿಯುತ್ತಿದ್ದಾರೆ.

Recommended