ಆಸ್ತಿಗೂ ಆಧಾರ್ ಜೋಡಣೆ ಕಡ್ಡಾಯ ಮಾಡುವ ಕಾಲ ದೂರವಿಲ್ಲ! | Oneindia Kannada

  • 7 years ago
ಕಪ್ಪು ಹಣ ನಿಯಂತ್ರಿಸುವುದಕ್ಕಾಗಿ ನೋಟು ನಿಷೇಧ ಮಾಡಲಾಯಿತು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಅನೇಕ ಆಕ್ಷೇಪಗಳು ವ್ಯಕ್ತವಾಗಿದ್ದವು. ಏಕೆಂದರೆ ನಗದು ರೂಪದಲ್ಲಿ ಕಪ್ಪು ಹಣ ಇರಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಲಾಗಿರುತ್ತದೆ ಎಂಬುದು ಹಲವರ ಅಭಿಪ್ರಾಯ ಆಗಿತ್ತು. ಇನ್ನು ಕೇಂದ್ರ ಸರಕಾರ, ಅಪನಗದೀಕರಣವು ಕಪ್ಪು ಹಣ ನಿಯಂತ್ರಿಸುವಲ್ಲಿನ ಮೊದಲ ಹೆಜ್ಜೆ. ಇನ್ನೂ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿತ್ತು. ಆ ದೊಡ್ಡ ನಿರ್ಧಾರ ಅಂದರೆ ಕಪ್ಪು ಹಣ ನಿಯಂತ್ರಣಕ್ಕೆ ಸ್ಥಿರಾಸ್ತಿ ಮೇಲೆ ಕಣ್ಣಿರಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರೊಬ್ಬರು ಇಶಾರೆ ನೀಡಿದ್ದಾರೆ. ಅದರ ಪ್ರಕಾರ ಆಸ್ತಿ ವ್ಯವಹಾರಗಳಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡುವ ಪ್ರಸ್ತಾವದ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಈ ರೀತಿ ಆಧಾರ್ ಜೋಡಣೆ ಮಾಡುವುದರಿಂದ ಬೇನಾಮಿ ಆಸ್ತಿ ಗುರುತಿಸುವುದು ಸರಳವಾಗುತ್ತದೆ ಎಂದು ಹೇಳಿದ್ದಾರೆ.

Linking aadhaar card to your property will be mandatory very soon. Central minister Hardeep Puri revealed the overview and its uses

Recommended