ಅಂಜನೀಪುತ್ರ' ಪುನೀತ್ ಕೆರಿಯರ್ ನ ಮೈಲಿಗಲ್ಲು ಸಿನಿಮಾ, ಕಾರಣ ಏನು..? | Filmibeat Kannada

  • 6 years ago
ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನೀಪುತ್ರ' ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಅಲ್ಲದೆ ಈ ಸಿನಿಮಾ ಈಗ ಪುನೀತ್ ಕೆರಿಯರ್ ನಲ್ಲಿ ಒಂದು ಮೈಲಿಗಲ್ಲು ಚಿತ್ರವಾಗುವುದು ಪಕ್ಕಾ ಆಗಿದೆ. ಒಬ್ಬ ನಟನಾಗಿ, ಗಾಯಕನಾಗಿ ಒಬ್ಬ ನಿರ್ಮಾಪಕನಾಗಿ ಪುನೀತ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಬಳಿಕ ಒಂದು ಹೆಜ್ಜೆ ಮುಂದೆ ಹೋಗಿ ಅಪ್ಪು ತಮ್ಮದೇ ಆದ ಆಡಿಯೋ ಸಂಸ್ಥೆ ಸಹ ಶುರು ಮಾಡಿದ್ದರು. ಆದರೆ ಇದೀಗ 'ಅಂಜನೀಪುತ್ರ' ಚಿತ್ರದ ಹಾಡುಗಳ ಮೂಲಕ ಪುನೀತ್ ಆಡಿಯೋ ಸಂಸ್ಥೆ ಶುಭಾರಂಭ ಮಾಡಲಿದೆಯಂತೆ. ಮುಂದೆ ಓದಿ...'ಅಂಜನೀಪುತ್ರ' ಸಿನಿಮಾದ ಹಾಡುಗಳು ಪುನೀತ್ ಅವರ ಪಿ.ಆರ್.ಕೆ ಆಡಿಯೋ ಸಂಸ್ಥೆಯಿಂದ ಹೊರಬರಲಿದೆ. ಈ ಮೂಲಕ ಅಪ್ಪು ಆಡಿಯೋ ಕಂಪನಿಯಿಂದ ಖಾತೆ 'ಅಂಜನೀಪುತ್ರ' ದಿಂದ ಶುರುವಾಗಲಿದೆ.ಅಂಜನೀಪುತ್ರ' ಆಡಿಯೋ ಬಿಡುಗಡೆ ಕಾರ್ಯಕ್ರಮ ಇದೇ ತಿಂಗಳ 24 ರಂದು ಅದ್ದೂರಿ ಕಾರ್ಯಕ್ರಮದಲ್ಲಿ ನಡೆಯಲಿದೆ. ಇದೇ ಕಾರ್ಯಕ್ರಮದಲ್ಲಿ ಪುನೀತ್ ತಮ್ಮ ಆಡಿಯೋ ಸಂಸ್ಥೆ ಬಗ್ಗೆ ಅನೌನ್ಸ್ ಮಾಡಲಿದ್ದಾರಂತೆ.ಡಾ.ರಾಜ್ ಕುಮಾರ್ ಅವರ ಹಾಡುತ್ತಿರುವ ಚಿತ್ರವನ್ನು ಪಿ.ಆರ್.ಕೆ ಆಡಿಯೋ ಸಂಸ್ಥೆಯ ಲೋಗೋ ಆಗಿ ಬಳಸಿಕೊಂಡಿರುವುದು ವಿಶೇಷವಾಗಿದೆ.

Puneeth Rajkumar's 'PRK Audio' label opens with 'Anjaniputra' movie,"anjaniputhra" is the milestone movie for punith rajkumar , do you know the reason,. watch this video

Recommended