ಬಸ್‌ನಲ್ಲಿ ಬೆಳಗಾವಿಗೆ ಬಂದ ಆರೋಗ್ಯ ಸಚಿವ ರಮೇಶ್ ಕುಮಾರ್ | Oneindia Kannada

  • 7 years ago
ಕೆಲ ಸಚಿವರಿಗೆ ಕಾರು ಬಿಟ್ಟು ಕಾಲು ನೆಲಕ್ಕೆ ಇಳಿಯುವುದಿಲ್ಲ, ಕೆಲವರಿಗೆ ದೂರ
ಪ್ರಯಾಣಕ್ಕೆ ಹೆಲಿಕಾಪ್ಟರ್ರೇ ಆಗಬೇಕು ಆದರೆ ಆರೋಗ್ಯ ಸಚಿವ ರಮೇಶ್ ಕುಮಾರ್ ಉಳಿದ
ಸಚಿವರಿಗೆ ಕೊಂಚ ಭಿನ್ನ ಅವರು ಐಶಾರಾಮಿತ್ವಕ್ಕೆ ಮಹತ್ವ ಕೊಡುವುದಿಲ್ಲ ಅದಕ್ಕೆ ತಾಜಾ
ಉದಾಹರಣೆ ಇಲ್ಲಿದೆ ನೋಡಿ. ಸೋಮವಾರ (ನವೆಂಬರ್ 20) ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಲು
ಸಚಿವ ರಮೇಶ್ ಕುಮಾರ್ ಬಂದಿದ್ದು ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ. ಬೆಳಗಾವಿಗೆ ಬರಲು
ರಾತ್ರಿ ರೈಲು ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ರೈಲು ಮಿಸ್ ಆದ ಪರಿಣಾಮ
ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿದ್ದಾರೆ ಸಚಿವರು. ಬಸ್ ಅನುಭವ ಅದ್ಬುತವಾಗಿತ್ತು
ಎಂದಿರುವ ರಮೇಶ್ ಕುಮಾರ್ ಕೆ.ಎಸ್.ಆರ್.ಟಿ.ಸಿ ಕಾರ್ಮಿಕರನ್ನು ಮನಸಾರೆ ಹೊಗಳಿದ್ದಾರೆ.
ಕಾರ್ಮಿಕರು ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ, ಬಸ್ ಅನ್ನು ಸ್ವಚ್ಚವಾಗಿ
ಇಟ್ಟುಕೊಂಡಿದ್ದಾರೆ. ಜಾಗೃತೆಯಿಂದ ಬಸ್ ಓಡಿಸುತ್ತಾರೆ, ನಮ್ಮಂತಹ ವಯಸ್ಸಾದಾವರಿಗೆ
ಅಲ್ಲಲ್ಲಿ ಬಸ್ ನಿಲ್ಲಿಸಿ ಸಹಕರಿಸುತ್ತಾರೆ' ಎಂದು ಕಾರ್ಮಿಕರ ಶ್ರಮವನ್ನು ಹಾಡಿ ಹೊಗಳಿದರು

Ramesh Kumar stands different while compared to other ministers .
Ramesh kumar chose to show up in a Government bus at belagavi and set an
example for the rest.