ಸಾಯಿ ಪಲ್ಲವಿ ಅಲಿಯಾಸ್ ಮಲರ್ ಕನ್ನಡ ಸಿನಿಮಾದಲ್ಲಿ | Filmibeat Kannada

  • 7 years ago
ಸ್ಯಾಂಡಲ್ ವುಡ್ ಗೆ ಬಂದರು 'ಪ್ರೇಮಂ' ಬೆಡಗಿ 'ಸಾಯಿಪಲ್ಲವಿ'? ಸಿನಿಮಾರಂಗದಲ್ಲಿ 'ಮಲರ್' ಅಂತಾನೇ ಫೇಮಸ್ ಆಗಿರುವ 'ಸಾಯಿಪಲ್ಲವಿ' ಕನ್ನಡ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳುದಿಲ್ಲವೇ..? 'ಪ್ರೇಮಂ' ಬೆಡಗಿಯನ್ನ ಸ್ಯಾಂಡಲ್ ವುಡ್ ಗೆ ಕರೆತರೋದಿಲ್ಲವೇ.? ಅನ್ನೋದು ಅದೆಷ್ಟೋ ಹುಡುಗರ ಪ್ರಶ್ನೆ ಆಗಿತ್ತು. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. 'ಸಾಯಿಪಲ್ಲವಿ'ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ 'ಪ್ರಜ್ವಲ್ ದೇವರಾಜ್' ಜೊತೆಯಲ್ಲಿ 'ಪ್ರೇಮಂ' ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ. ಹಾಗಾದ್ರೆ ಆ ಸಿನಿಮಾ ತಂಡ ಯಾವುದು.? ಮಲರ್ ದರ್ಶನ ಯಾವಾಗ ಆಗುತ್ತೆ ಅಂತೀರಾ, ಸೆಟ್ಟೇರಲು ಸಜ್ಜಾಗಿರುವ ಚಿತ್ರತಂಡ ಸಾಯಿಪಲ್ಲವಿಯವರನ್ನ ತಮ್ಮ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಡೇಟ್ಸ್ ಗಾಗಿ ಮಾತುಕತೆ ನಡೆಸಲು ಮುಂದಾಗಿದ್ದು, ನಟ ಪ್ರಜ್ವಲ್ ಅಭಿನಯದ ಮುಂದಿನ ಸಿನಿಮಾಗೆ ಸಾಯಿಪಲ್ಲವಿಯರನ್ನ ಕರೆತರುವ ಸಾಧ್ಯತೆಗಳು ಹೆಚ್ಚಾಗಿದೆ.

Recommended