Karnataka Private Doctors Strike on KPME Bill : ಜೋಗಿ ಅಲಿಯಾಸ್ ಗಿರೀಶ್ ರಾವ್ ವೈದ್ಯರಿಗೆ ಬರೆದ ಆತ್ಮೀಯ ಪತ್ರ

  • 7 years ago
Journalist Jogi alias Girish Rao has posted an Open letter to Private Hospital Doctors and asked them about the strike/protest which they are staging against KPME Act by GoK.
ಖಾಸಗಿ ಆಸ್ಪತ್ರೆ ವೈದ್ಯರಿಗೆ ಜೋಗಿ ಬರೆದ ಆತ್ಮೀಯ ಪತ್ರ.

ಡಿಯರ್ ಡಾಕ್ಟರ್ಸ್,
ನಮಸ್ಕಾರ,
ಹೇಗಿದ್ದೀರಿ? ನಿಮ್ಮ ಆರೋಗ್ಯ ಚೆನ್ನಾಗಿರಬೇಕು. ನೀವು ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ ಎಂಬುದು ನಮ್ಮ ಅನಾದಿಕಾಲದ ನಂಬಿಕೆ. ಹೀಗಾಗಿ ನಿಮ್ಮ ಆರೋಗ್ಯ ವಿಚಾರಿಸಿಕೊಳ್ಳುವುದು ಕೂಡ ನಮ್ಮ ಕರ್ತವ್ಯ ಮತ್ತು ಪ್ರೀತಿ.ಇತ್ತೀಚೆಗೆ ನಿಮ್ಮ ಆರೋಗ್ಯ ಸರಿಯಿಲ್ಲ ಎಂಬುದು ಪತ್ರಿಕೆಗಳಿಂದ ಗೊತ್ತಾಗುತ್ತಿದೆ. ಅದಕ್ಕೆ ಕಾರಣಗಳಿವೆ ಎಂದು ನೀವು ವಾದಿಸುತ್ತಿದ್ದೀರಿ. ನಿಮ್ಮ ವಾದವನ್ನು ನಾನು ನಿರಾಕರಿಸುವುದಕ್ಕೆ ಹೋಗುವುದಿಲ್ಲ. ಎಲ್ಲಾ ವಾದಗಳಲ್ಲೂ ಹುರುಳಿದ್ದೇ ಇರುತ್ತದೆ. ಪ್ರತಿಯೊಂದು ವಾದವೂ ಏಕಕಾಲಕ್ಕೆ ತಪ್ಪುಗಳ ಸಮರ್ಥನೆಯೂ ಕಷ್ಟಗಳ ನಿವೇದನೆಯೂ ಆಗಿರುತ್ತದೆ. ಯಾವುದು ಎಷ್ಟೆಷ್ಟಿರುತ್ತದೆ ಎನ್ನುವುದು ಅವರವರ ಪ್ರಾಮಾಣಿಕತೆಗೆ ಬಿಟ್ಟ ವಿಚಾರ.ಒಂದಂತೂ ಸತ್ಯ. ನೀವೂ ಕೂಡ, ಪತ್ರಕರ್ತರಾದ ನಮಗಿಂತ ತುಂಬ ಎತ್ತರದ ಸ್ಥಾನದಲ್ಲಿ ಇಲ್ಲ. ರಾಜಕಾರಣಿ, ಪೊಲೀಸು, ವಕೀಲ, ಪತ್ರಕರ್ತ- ಈ ನಾಲ್ಕು ವೃತ್ತಿಗಳಲ್ಲಿ ಇರುವವರನ್ನು ಜನ ಸಿಟ್ಟಿನಿಂದ, ಅಸಹ್ಯದಿಂದ ನೋಡಲು ಶುರುಮಾಡಿ ಬಹಳ ಕಾಲವೇ ಆಯಿತು. ಈ ಪಟ್ಟಿಗೆ ನೀವು ಕೂಡ ಕೆಲವು ವರ್ಷಗಳ ಹಿಂದೆ ಸೇರ್ಪಡೆಯಾದಿರಿ.

Recommended