ರಿಪೋರ್ಟರ್ ಕೇಳಿದ ಪ್ರಶ್ನೆಗೆ ವಿದ್ಯಾ ಬಾಲನ್ ಫುಲ್ ಗರಂ | FIlmibeat Kannada
  • 6 years ago
When a reporter asked Vidya Balan if she plans to lose weight, the actress said, that people like him should lose their mindset.

ಜರ್ನಲಿಸ್ಟ್ ಕೇಳಿದ ಪ್ರಶ್ನೆಗೆ ಸಿಟ್ಟಿಗೆದ್ದ ವಿದ್ಯಾ ಬಾಲನ್.! ಆ ಪ್ರಶ್ನೆ ಏನು? ಬಾಲಿವುಡ್ ನಟ-ನಟಿಯರು ವರದಿಗಾರರ ಮೇಲೆ ಕೋಪಗೊಳ್ಳುವುದು ಸಾಮಾನ್ಯ. ಕೆಲವೊಮ್ಮ ರಿಪೋರ್ಟರ್ ಗಳು ಕೇಳುವ ಪ್ರಶ್ನೆಗಳು ಹಾಗೆ, ಅವರ ತಾಳ್ಮೆಯನ್ನ ಪರೀಕ್ಷಿಸುವಂತಿರುತ್ತೆ. ಇದೀಗ, ಬಾಲಿವುಡ್ ನಟಿ ವಿದ್ಯಾ ಬಾಲನ್ ಜರ್ನಲಿಸ್ಟ್ ಒಬ್ಬರು ಕೇಳಿದ ಪ್ರಶ್ನೆಗೆ ಸಿಟ್ಟಿಗೆದ್ದು ಉತ್ತರ ಕೊಟ್ಟಿರುವ ಘಟನೆ ನಡೆದಿದೆ.
ವಿದ್ಯಾ ಬಾಲನ್ ಅಭಿನಯದ 'ತುಮಾರಿ ತುಲ' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರದಲ್ಲಿ ನಟಿ ಭಾಗಿಯಾಗಿದ್ದರು. ಈ ವೇಳೆ ವರದಿಗಾರರೊಬ್ಬರು ವಿದ್ಯಾ ಬಾಲನ್ ಅವರಿಗೆ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನಿಸಿದ್ದಾರೆ. ಇದು ನಟಿಗೆ ಮುಜುಗರ ಉಂಟು ಮಾಡಿದ್ದಲ್ಲದೇ ಪಿತ್ತ ನೆತ್ತಿಗೇರಿಸಿದೆ. ನಂತರ ಸಮಾಧಾನವಾಗಿ ಉತ್ತರಿಸಿದ್ದಾರೆ.ಅಂದ್ಹಾಗೆ, ಆ ಜರ್ನಲಿಸ್ಟ್ ಕೇಳಿದ ಪ್ರಶ್ನೆ, ವಿದ್ಯಾ ಬಾಲನ್ ಅವರ ತೂಕಕ್ಕೆ ಸಂಬಂಧಿಸಿದ್ದು. ವಿದ್ಯಾ ಬಾಲನ್ ಮತ್ತು ವರದಿಗಾರನ ಸಂಭಾಷಣೆ ಹೇಗಿತ್ತು
Recommended