ಸದ್ಯದಲ್ಲೇ ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ ಆರಂಭ | Oneindia Kannada

  • 7 years ago
Groundnut Carnival ( Kadlekai Parishe ) is one of the oldest festivals in Bengaluru. Farmers from villages all around Bengaluru come here to offer groundnut to Basava statue and sell. Bendu, Battasu, Bangles, Soap Bubbles, Columbus... you can find everything here.


ಇನ್ನೇನು ಕಡೆಯ ಕಾರ್ತಿಕ ಸೋಮವಾರ ಬಂತು, ಬಸವನಗುಡಿಯ ಕಡೆ ನಮ್ಮ ಪಯಣ ಶುರುವಾಗಲೇ ಬೇಕು. ಯಾಕಂತ ಕೇಳಿದ್ರಾ ಬೆಂಗಳೂರಿನಲ್ಲಿ ನಡೆಯುವ ಕಡಲೆಕಾಯಿ ಪರಿಷೆಯನ್ನ ನೋಡೋದಕ್ಕೆ ಹೋಗಲೇಬೇಕು. ಈ ಹಬ್ಬ ಒಂದು ಥರಹ ನಮ್ಮ ನಗರದ ಹಳ್ಳಿಯ ಚರಿತ್ರೆಯನ್ನ ಬಿಚ್ಚಿಡುವ ಒಂದು ಪ್ರಕ್ರಿಯೆ. ಬಸವನಗುಡಿಯ ಕಥೆಯೂ ಅಷ್ಟೆ ವಿಸ್ಮಯಕಾರಿ. ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ ಇದೆಲ್ಲಾ ನಮ್ಮ ನಗರದ ಮಧ್ಯ ಭಾಗವಿರುವ ಬಡಾವಣೆಯಲ್ಲಿ ನಡೆಯತ್ತೆ ಎಂದರೆ ನಂಬೋದೆ ಅಸಾಧ್ಯ. ಸರಿ ಯಥಾಪ್ರಕಾರ ನಂದಿಯ ಮೊರೆ ಹೋಗಿ, ಅವರು ಬೆಳೆದ ಮೊದಲ ಬೆಳೆಯನ್ನ ದೇವರಿಗೆ ಅರ್ಪಿಸಿ, ನಂತರ ಮಾರಾಟಕ್ಕೆ ಇಡೋದು ನಡೆದುಬಂದ ಸಂಪ್ರದಾಯ. ಈಗಲೂ ಬಸವನಿಗೆ ಕಡಲೆಕಾಯಿ ಅಭಿಷೇಕ ನಡೆಯೋದು ನೋಡಬಹುದು. ಇನ್ನು ಈ ಬಸವನಿಗೂ ಸ್ವಾರಸ್ಯಕರ ಕಥೆಯಿದೆ. ನೀವು ದೇವಸ್ಥಾನಕ್ಕೆ ಹೋದರೆ ಬಸವನ ತಲೆ ಮೇಲೆ ಒಂದು ಗೂಟ ನೋಡಬಹುದು, ಬಸವನ ಮೂರ್ತಿ ವಿಪರೀತವಾಗಿ ಬೆಳೆಯುವುದನ್ನು ನಿಲ್ಲಿಸಲು ಇದು ಮಾಡಲಾಯಿತಂತೆ. ಹೀಗೆ ಚಿತ್ರ ವಿಚಿತ್ರವಾದ ಕಥೆಗಳು ಹೊಂದಿರುವ ಜಾಗವಿದು.

Recommended