ಬಿಗ್ ಬಾಸ್ ಕನ್ನಡ-5': ನಾಲ್ಕನೇ ವಾರ ಹೊರಬೀಳೋರು ಯಾರು.? | Filmibeat Kannada

  • 7 years ago
ಸ್ಯಾಂಡಲ್ ವುಡ್ ಸ್ಟಾರ್ ಗಳ ಬರ್ತಡೇಯನ್ನ ಅದ್ಧೂರಿಯಾಗಿ ಆಚರಿಸುವುದು ಕಾಮನ್. ಅದೇ ರೀತಿ ಸ್ಟಾರ್ ಮಕ್ಕಳ ಬರ್ತಡೇ ಗಳನ್ನ ಕೂಡ ಅಷ್ಟೇ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡೋದು ಈಗಿನ ಟ್ರೆಂಡ್.
ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ಬರ್ತಡೇಯನ್ನ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಲಾಗಿತ್ತು. ಅಭಿಮಾನಿಗಳು ದರ್ಶನ್ ಮನೆಗೆ ಹೋಗಿ ಲಿಟಲ್ ಸ್ಟಾರ್ ಗೆ ಶುಭಕೋರಿ ಬಂದಿದ್ದರು. ಈಗ ನಟ, ನಿರ್ದೇಶಕ ಜೋಗಿ ಪ್ರೇಮ್ ಅವರ ಪುತ್ರ ಸೂರ್ಯ ತಮ್ಮ ಬರ್ತಡೇಯನ್ನ ವಿಶೇಷವಾಗಿ ಆಚರಣೆ ಮಾಡಿಕೊಂಡಿದ್ದಾರೆ.ಜೋಗಿ ಪ್ರೇಮ್ ಹಾಗೂ ನಟಿ ರಕ್ಷಿತ ದಂಪತಿಯ ಏಕೈಕ ಪುತ್ರ ಸೂರ್ಯ. ಸೂರ್ಯನ ಬರ್ತಡೇಯನ್ನ ನಟಿ ರಕ್ಷಿತಾ ಸಖತ್ ಕಲರ್ ಫುಲ್ ಆಗಿ ಅಯೋಜನೆ ಮಾಡಿದ್ದು, ಸೂರ್ಯನ ಫ್ರೆಂಡ್ಸ್ ಮತ್ತು ಸಂಬಂಧಿಕರನ್ನ ಇನ್ವೈಟ್ ಮಾಡಿ ಹುಟ್ಟುಹಬ್ಬವನ್ನ ಆಚರಣೆ ಮಾಡಲಾಯ್ತು. ಸೂರ್ಯನ ಈ ವರ್ಷದ ಬರ್ತಡೇಯನ್ನ ಸ್ಪೈಡರ್ ಮ್ಯಾನ್ ಕಾನ್ಸೆಪ್ಟ್ ನಲ್ಲಿ ಮಾಡಲಾಯ್ತು. ಸ್ಚೈಡರ್ ಮ್ಯಾನ್ ಕೇಕ್ ಹಾಗೂ ಸೂಪರ್ ಕಾರ್ ಕೇಕ್ ಈ ವರ್ಷದ ಬರ್ತಡೇಯ ಹೈಲೆಟ್ ಆಗಿತ್ತು. ಮುದ್ದು ಮಗನ ಹುಟ್ಟುಹಬ್ಬಕ್ಕಾಗಿ ರಕ್ಷಿತಾ ಸಾಕಷ್ಟು ತಯಾರಿ ಮಾಡಿದ್ದರು.

Recommended