ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಅಡುಗೆಗೆ ಫ್ಯಾನ್ಸ್ ಫುಲ್ ಫಿದಾ

  • 7 years ago
Kichcha Sudeep's Kirik Chicken goes popular. Sudeep fans follow his style of cooking & evryone are trying the recipe which Sudeep has thought in Kichchana Kitchen Time.

ಮನೆ ಮನೆಯಲ್ಲೂ ಕಿಚ್ಚನ 'ಕಿರಿಕ್ ಚಿಕನ್'ನದ್ದೇ ಘಮಲು.! ಕಿಚ್ಚ ಸುದೀಪ್ ಅಭಿನಯ ಚಕ್ರವರ್ತಿ ಏನೇ ಮಾಡಿದ್ರು ಅದು ಟ್ರೆಂಡ್ ಹುಟ್ಟುಹಾಕ್ತಿದೆ. ಅವರ ಅಭಿಮಾನಿಗಳೇ ಹಾಗೆ, ಕಿಚ್ಚನ ಲೈಫ್ ಸ್ಟೈಲ್ ಅನ್ನ ಪಿನ್ ಟು ಪಿನ್ ಫಾಲೋ ಮಾಡ್ತಾರೆ. ಅಷ್ಟೇ ಅಲ್ಲದೆ ಅವರ ಮಕ್ಕಳಿಂದಲೂ ಅದನ್ನ ಫಾಲೋ ಮಾಡಿಸ್ತಾರೆ. ಅಷ್ಟರ ಮಟ್ಟಿಗೆ ಸುದೀಪ್, ಅಭಿಮಾನಿಗಳ ಮನಸ್ಸಿನಲ್ಲಿ ಆಳವಾಗಿ ಕುಳಿತುಬಿಟ್ಟಿದ್ದಾರೆ. ಸದ್ಯ, ಕಿಚ್ಚನ ಕಿಚನ್ ಸ್ಟೈಲ್ ಎಲ್ಲಾ ಮಹಿಳಾ ಅಭಿಮಾನಿಗಳ ಮನೆಯಲ್ಲಿ ಟ್ರೆಂಡ್ ಸೆಟ್ ಮಾಡ್ತಿದೆ. ವೀಕ್ ಎಂಡ್ ವಿಶೇಷವಾಗಿ ಬಿಗ್ ಬಾಸ್ ಕಾರ್ಯಕ್ರಮದ ಕಿಚ್ಚನ್ ಟೈಂ ನಲ್ಲಿ ಅತಿಥಿಗಳನ್ನ ಕರೆಸಿ ಅವರಿಗೆ ಒಂದು ಸ್ಪೆಷಲ್ ಆಗಿರುವ ಡಿಷ್ ಅನ್ನ ಹೇಳಿಕೊಡ್ತಾರೆ. ಅದನ್ನ ಈಗ ಅಭಿಮಾನಿಗಳು ತಮ್ಮ ಮನೆಯಲ್ಲಿ ಟ್ರೈ ಮಾಡಿ ಟ್ವಿಟ್ಟರ್ ಮೂಲಕ ಕಿಚ್ಚನಿಗೆ ತಲುಪಿಸುತ್ತಿದ್ದಾರೆ.