ಬಿಗ್ ಬಾಸ್ ಕನ್ನಡ ಸೀಸನ್ 5 : ಸಮೀರ್ ಆಚಾರ್ಯಗೆ ಶಿಕ್ಷೆ ಆದದ್ಯಾಕೆ? | Filmibeat Kannada

  • 7 years ago
ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ ಕ್ಯಾಪ್ಟನ್ ಸಮೀರಾಚಾರ್ಯ.! 'ಬಿಗ್ ಬಾಸ್' ಮನೆಯಲ್ಲಿ ಈ ವಾರ ಸಮೀರಾಚಾರ್ಯ ಕ್ಯಾಪ್ಟನ್ ಆಗಿ ಆಯ್ಕೆ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯ ಎಡವಟ್ಟು ಮಾಡ್ತಾನೆ ಇದ್ದಾರೆ. ನಿನ್ನೆಯ (ಶುಕ್ರವಾರ) ಎಪಿಸೋಡ್ ನಲ್ಲಂತೂ ಸಮೀರ್ ಅವರು ಪದೇ ಪದೇ ಗೊಂದಲಕ್ಕೀಡಾದರು. ಇದರಿಂದ ಮನೆಯ ಸದಸ್ಯರಿಗೂ ಕಿರಿಕಿರಿಯಾಗಿದ್ದಲ್ಲದೇ, ಮನಸ್ತಾಪ ಕೂಡ ಉಂಟಾಯಿತು. ಮನೆಯ ಕ್ಯಾಪ್ಟನ್ ಸಮೀರಾಚಾರ್ಯ ಅವರು ಮಾಡಿದ ತಪ್ಪಿಗೆ 'ಬಿಗ್ ಬಾಸ್' ಕೂಡ ಶಿಕ್ಷೆ ಕೊಟ್ಟರು. ಹಾಗಿದ್ರೆ, ಸಮೀರಾಚಾರ್ಯ ಮಾಡಿದ ಎಡವಟ್ಟೇನು?ಉತ್ತಮ ಪ್ರದರ್ಶನ ಆಯ್ಕೆಯಲ್ಲಿ ಗೊಂದಲ! ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಅಂತ್ಯವಾಗಿದ್ದು, ಈ ವಾರದ ಉತ್ತಮ ಪ್ರದರ್ಶನ ಮತ್ತು ಕಳಪೆ ಪ್ರದರ್ಶನ ಆಯ್ಕೆ ಮಾಡಬೇಕಿತ್ತು. ಈ ವೇಳೆ ಮನೆಯ ಕ್ಯಾಪ್ಟನ್ ಸಮೀರ್ ಅವರು ತಪ್ಪು ಆಯ್ಕೆ ಮಾಡಿದರು.

Recommended